ಇದೀಗ ಬಂದ ಸುದ್ದಿ: ಮಾಜಿ ಸಚಿವ, ರಾಜ್ಯದ ಪ್ರಭಾವಿ ನಾಯಕ ಧಿಡೀರ್ ರಾಜಕೀಯ ನಿವೃತ್ತಿ.?

ನನ್ನ ಮೇಲೆ ಯಾಕಿಷ್ಟು ದ್ವೇಷ. ನನ್ನ ಯಾಕೆ ಇಷ್ಟು ವಿರೋಧಿಸ್ತಾ ಇದ್ದೀರಿ.? ನೀವು ಪಕ್ಷಕ್ಕೆ ಬರ್ತೀನಿ ಅಂದ್ರೇ, ನಾನು ಪಾರ್ಟಿಯನ್ನೇ ಬಿಡ್ತೀನಿ. ಅಲ್ಲದೇ ನಾನು ರಾಜಕೀಯ ನಿವೃತ್ತಿಯನ್ನೇ ಪಡೆಯುತ್ತೇನೆ ಎಂಬುದಾಗಿ ಕಣ್ಣೀರಿಡುತ್ತಲೇ, ಶಾಸಕ ಜಿಟಿ ದೇವೇಗೌಡರನ್ನು ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವುದಕ್ಕೆ, ಮಾಜಿ ಸಚಿವ ಸಾರಾ ಮಹೇಶ್ ಆಹ್ವಾನಿಸಿದ್ದಾರೆ.

ಈ ಕುರಿತಂತೆ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಮಾಜಿ ಸಚಿವ ಸಾರಾ ಮಹೇಶ್, ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವಂತ ಶಾಸಕ ಜಿಟಿ ದೇವೇಗೌಡ ಅವರನ್ನು ತನ್ನ ಗುರುಗಳು ಎಂಬುದಾಗೇ ಸಂಬೋಧಿಸಿ, ಕಣ್ಣೀರಿಟ್ಟರು. ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಯಾಕೆ ಹಾಗೆ ಮಾಡಿದ್ರಿ. ಯಾಕೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ವೇಳೆಯಲ್ಲಿ ಗೈರು ಹಾಜರಾದ್ರಿ. ? ನಮ್ಮ ತಪ್ಪು ಇದ್ದರೇ ತಿಳಿಸಿ, ತಿದ್ದಿಕೊಳ್ಳುತ್ತೇವೆ. ನಿಮ್ಮನ್ನು ನಮ್ಮ ನಾಯಕರು ಎಂಬುದಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿದರು.

ನಾಳೆಯಿಂದ ಬನ್ನಿ ಜವಾಬ್ದಾರಿ ತಗೊಳ್ಳಿ. ನೀವು ಬರುವುದಾದರೇ ನಾನು ಪಾರ್ಟಿಯನ್ನೇ ಬಿಡುತ್ತೇನೆ. ಇನ್ನೆರಡು ವರ್ಷ ಆದ್ಮೇಲೆ ನಾನು ಸಾರ್ವಜನಿಕ ಜೀವನದಿಂದಲೇ ದೂರ ಆಗುತ್ತೇನೆ. ನೀವು ಬಂದು ಕುಮಾರಸ್ವಾಮಿಯವರೊಂದಿಗೆ ಮಾತನಾಡಿ, ಪಾರ್ಟಿ ಕಟ್ಟಿ ಎಂಬುದಾಗಿ ಕೋರಿಕೊಂಡರು.

Comments