ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನ ನಾಯಕ ಎಚ್. ಡಿ ಕುಮಾರಸ್ವಾಮಿಯವರ ಕರ್ಮಭೂಮಿಯೆಂದೆ ಖ್ಯಾತಿ ಪಡೆದಿರುವ ರಾಮನಗರದಲ್ಲಿ ಬಿಜೆಪಿ ತನ್ನ ಅದಿಪತ್ಯವನ್ನು ಸಾಧಿಸಲು ಮುಂದಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮಾತ್ರವಲ್ಲದೆ ಇದು ಜೆಡಿಎಸ್ ಪಕ್ಷಕ್ಕೆ ಭಾರೀ ದೊಡ್ಡ ಸವಾಲಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇಲ್ಲಿಯ ತನಕ ರಾಮನಗರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರದ ಅದಿಪತ್ಯವನ್ನು ಸ್ಥಾಪಿಸಿದ್ದವು ಈಗ ಇದನ್ನು ಬಿಜೆಪಿ ತನ್ನ ತೆಕ್ಕೆ ಹಾಕಿಕೊಳ್ಳಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ರಾಮನಗರದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಾಗಲೇ ಬಿಜೆಪಿ ತನ್ನ ಪ್ಲಾನ್ ರೂಪಿಸಿದ್ದು ಈ ಸಂಬಂಧ ಉಪಮುಖ್ಯಮಂತ್ರಿ ಆಶ್ವಥ್ ನಾರಯಣ್ ಜೊತೆ ಮಾತುಕತೆ ನಡೆಸಿದೆ. ರಾಮನಗರದಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಪ್ಲಾನ್ ರೂಪಿಸಿದೆ.
ರಾಮನಗರದಲ್ಲಿ ಸರಿಯಾದ ರಸ್ತೆಗಳಲಿಲ್ಲ, ಕುಡಿಯುವ ನೀರಿನ ಸಮಸ್ಯೆ ಹಾಗೂ ಉದ್ಯೋಗಕ್ಕಾಗಿ ಇಲ್ಲಿನ ಜನರು ಬೆಂಗಳೂರಿಗೆ ಬರಬೇಕಾಗಿರುವುದು ಆನಿವಾರ್ಯವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಜನರ ಮನಮುಟ್ಟುವಂತೆ ಸಮಸ್ಯೆಗಳನ್ನು ಹೇಳಿ ಅದರ ಪ್ರಯೋಜನ ಪಡೆದುಕೊಌ ಎಂದು ಕರೆ ನೀಡಿದ್ದಾರೆ.
Comments
Post a Comment