ಸಮೀಕ್ಷೆಯಿಂದ ಹೊರಬಿತ್ತು ಕರ್ನಾಟಕದ ಲೋಕಸಭಾ ಚುನಾವಣಾ ಫಲಿತಾಂಶ.! ಕಾಂಗ್ರೆಸ್ ಗೆ ಮತ್ತೇ ಕೈ ಹಿಡಿಯುತ್ತ ಗ್ಯಾರಂಟಿ.?


ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿ 2024ರ ಲೋಕಸಭಾ ಚುನಾವಣೆಯ ಕಾವು ಭಾರೀ ಜೋರಾಗಿ ಕೇಳಿಸುತ್ತಿದೆ. ಒಂದು ಕಡೆ ಆಭ್ಯರ್ಥಿಗಳು ಟಿಕೆಟ್ ಗೆ ಹೋರಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ ಪಕ್ಷಗಳು ತಮ್ಮ ಗೆಲುವಿನ ಲೆಕ್ಕಾಚಾರಗಳನ್ನು ನಡೆಸುತ್ತಿದೆ. 

ಮಾಧ್ಯಮ ಸಂಸ್ಥೆಗಳು ಸಮೀಕ್ಷೆಗಳನ್ನು ನಡೆಸುವುದರಲ್ಲಿ ಬ್ಯುಸಿಯಾಗಿದೆ. ರಾಜ್ಯವಾರು ಹಾಗೂ ದೇಶವಾರು ಆನೇಕ ಸಮೀಕ್ಷೆಗಳನ್ನು ಹಲವಾರು ಸಂಸ್ಥೆಗಳು ಈಗಾಗಲೇ ನಡೆಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಲೋಕಸಭಾ ಸ್ಥಾನಗಳನ್ನು ಯಾವ ಪಕ್ಷಗಳು ಎಷ್ಟು ಗೆಲ್ಲಲಿದೆ ಎಂಬುದರ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದೆ.

ಭಾರತದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಒಂದಾದ ಇಂಡಿಯಾ ಟುಡೆ ನಡೆಸಿದ ಸಮೀಕ್ಷೆಯ ಮಾಹಿತಿ ಹೊರಬಿದ್ದಿದ್ದು, ಸಮೀಕ್ಷೆಯ ವರದಿ ಭಾರೀ ಆಚ್ಚರಿಗೂ ಕಾರಣವಾಗಿದೆ. 

ಗ್ಯಾರಂಟಿ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಗೆ ಲೋಕಸಭೆಯಲ್ಲಿ ಮತ್ತೇ ಮುನ್ನಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು ಅದರೆ ಸದ್ಯ ಹೊರಬಿದ್ದಿರುವ ಸಮೀಕ್ಷೆಯನ್ನು ಗಮನಿಸಿದರೆ ಮತ್ತೇ ಲೊಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮಾತ್ರವಲ್ಲದೆ ಬಿಜೆಪಿ ಜಂಟಿಯಾಗಿ ಸುಮಾರು 24ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂಬ ಭವಿಷ್ಯವನ್ನು ಸಮೀಕ್ಷೆಗಳು ನುಡಿದಿವೆ. 

Comments