ಜಗತ್ತಿನಲ್ಲಿ ಅತ್ಯಂತ ವಿಶೇಷ ಹಾಗೂ ವಿಶಿಷ್ಟವಾದ ವ್ಯಕ್ತಿಗಳನ್ನು ನೀವೂ ಕಂಡಿರಬಹುದು ಮಾತ್ರವಲ್ಲದೆ ಇದು ಆನೇಕ ವ್ಯಕ್ತಿಗಳಿಗೆ ಒಂದು ರೀತಿಯ ಸಮಸ್ಯೆ ಅಥವಾ ಮಾನಸೀಕ ರೋಗ ಎಂದು ಕರೆಯುತ್ತಾರೆ. ಪ್ರಪಂಚದಾಂತ್ಯ ಆನೇಕ ಚಿತ್ರ ವಿಚಿತ್ರ ವ್ಯಕ್ತಿಗಳನ್ನು ನಾವು ಕಾಣಬಹುದು ಅದೇ ರೀತಿಯ ವಿಚಿತ್ರ ವ್ಯಕ್ತಿಯೆಂದರೆ ಇರಾನಿನ ಮೊನೊ. ಇರಾನಿನಾ ಮೊನೊ ಎಷ್ಟು ವಿಚಿತ್ರ ವ್ಯಕ್ತಿಯೆಂದರೆ ಆತ ಕಳೆದ 65 ವರ್ಷಗಳಿಂದ ಸ್ನಾನ ಮಾಡಲೇ ಇಲ್ಲ.
ಇರಾನಿನ ಮೊನೊ ಸುಮಾರು 83 ವರ್ಷದ ವ್ಯಕ್ತಿ. ಇರಾನಿನ ಮರುಭೂಮಿಯಲ್ಲಿ ವಾಸಿಸುವ ಈತ ನೀರನ್ನು ಕಂಡರೆ ಭಯಪಡುತ್ತಾನೆ. ಇದೇ ಕಾರಣಕ್ಕಾಗಿ ಆತ ಕಳೆದ 65 ವರ್ಷಗಳಿಂದ ಸ್ನಾನ ಮಾಡಿಲ್ಲ. ವಿಶ್ವದ ಅತ್ಯಂತ ಕೊಳಕು ವ್ಯಕ್ತಿ ಎಂಬ ಕುಖ್ಯಾತಿಗೆ ಮೊನೊ ಪಾತ್ರನಾಗಿದ್ದನೆ. ಸ್ನಾನ ಮಾಡದ ಈ ವ್ಯಕ್ತಿ ತಾನು ಸೇರಿಸುವ ಆಹಾರದಲ್ಲಿಯೂ ವಿಶಿಷ್ಠ ಹಾಗೂ ವಿಭಿನ್ನವಾದ ಕ್ರಮವನ್ನು ಆಯ್ದುಕೊಂಡಿದ್ದಾನೆ.
ಮೊನೊ ತಾನು ಸೇವಿಸುವ ಯಾವುದೇ ಆಹಾರಗಳನ್ನು ಬೇಯಿಸುವುದಿಲ್ಲ ಬದಲಾಗಿ ಕೊಳೆತ ಮುಳ್ಳುಹಂದಿಯಂತಹ ಪ್ರಾಣಿಯನ್ನು ತನ್ನ ಆಹಾರವನ್ನಾಗಿ ಸೇವಿಸುತ್ತಾನೆ. ಸಿಗರೇಟ್ ಸೇದುವ ಮೊನೊ ಸಿಗರೇಟ್ ದೊರೆಯದ ಸಂಧರ್ಭದಲ್ಲಿ ಪಾಣಿಗಳ ಮಲವನ್ನು ಒಣಗಿಸಿ ಅದನ್ನು ಸಿಗರೇಟ್ ಆಗಿ ಸೇದುತ್ತಾನೆ. ಒಟ್ಟಾರೆಯಾಗಿ ವಿಶ್ವದಲ್ಲಿ ಅತ್ಯಂತ ಕೊಳಕು ವ್ಯಕ್ತಿಯಾಗಿರುವ ಮೊನೊ, ಈ ರೀತಿ ಇರಲು ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ.
Comments
Post a Comment