ರಷ್ಯಾದಿಂದ ಭಾರತಕ್ಕೆ ಸಿಕ್ತು ಭರ್ಜರಿ ಗುಡ್ ನ್ಯೂಸ್: ರಷ್ಯಾ ಅಧ್ಯಕ್ಷ ಮೋದಿಗೆ ಹೇಳಿದ್ದೇನು

ಕೊರೋನಾದ ರುದ್ರ ನರ್ತಕ್ಕೆ ಇಡೀ ವಿಶ್ವವೇ ನಲುಗಿ ಹೋಗಿದೆ. ಒಂದು ಕಡೆ ಕೊರೋನಾದ ಮೊದಲ ಆಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಭಾರತ ಕೊರೋನಾದ ವಿರುದ್ದ ಹೋರಾಟದಲ್ಲಿ ಜಯಗಳಿಸಿತು ಎನ್ನುವಷ್ಟರಲ್ಲಿ ಎರಡನೇ ಆಲೆ ಭಾರತವನ್ನು ನಲುಗಿಸಿ ಬಿಟ್ಟಿದೆ. ಕೊರೋನಾದ ಮೃತ್ಯ ಕೂಪಕ್ಕೆ ಭಾರತದ ಜನತೆ ಒದ್ದಾಡುತ್ತಿದ್ದಾರೆ. ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾದ ಹೊಡೆತಕೆ ನಲುಗಿತ್ತು ಈ ಸಂಧರ್ಭದಲ್ಲಿ ಭಾರತ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ಸಹಾಯಸ್ತ ಚಾಚಿದೆ. ಸದ್ಯ ಭಾರತ ಒಂದು ಗಂಭೀರ ಪರಿಸ್ಥಿಯಲ್ಲಿರುವ ಸಂಧರ್ಭದಲ್ಲಿ ವಿಶ್ವದ ಹಲವಾರು ರಾಷ್ಟ್ರಗಳು ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ.

ಭಾರತಕ್ಕೆ ಲಸಿಕೆ ನೀಡುವುದರ ಬಗ್ಗೆ ರಷ್ಯಾದ ಅಧ್ಯಕ್ಷ ವಾಲ್ದಿಮರ್ ಪುಟಿನ್ ಕೆಲವು ದಿನಗಳ ಹಿಂದೆ ಮಹತ್ವದ ಮಾಹಿತಿ ನೀಡಿದ್ದರು ಸದ್ಯ ಭಾರತಕ್ಕೆ ರಷ್ಯಾದ ಸ್ಪುಟ್ನಿಕ್ ಲಸಿಕೆ ಮೇ ಮೊದಲ ವಾರದಲ್ಲಿ ದೊರಕಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಷ್ಠಾದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿ ವೆಂಕಟೇಶ್ ಶರ್ಮಾ ಮಾಹಿತಿ ನೀಡಿದ್ದಾರೆ.

ಭಾರತದ ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಯ ಕೊರತೆ ಎದುರಾಗಿದ್ದು, ಇತರ ಲಸಿಕೆಯನ್ನು ಬಳಸುವುದು ಅನಿವಾರ್ಯವಾಗಿದೆ. ಮಾತ್ರವಲ್ಲದೆ ಈಗಾಗಲೇ ರಷ್ಯಾ ಮೊದಲ ವಾರದಲ್ಲಿ ಲಸಿಕೆ ನೀಡುವ ಭರವಸೆ ನೀಡಿರುವುದು ಭಾರತಕ್ಕೆ ಮತ್ತೊಂದು ಸಿಹಿಸುದ್ದಿ ದೊರೆತಂತಾಗಿದೆ. ಇತ್ತೀಚೆಗೆ ಅಮೆರಿಕಾ ಕೂಡ ಭಾರತಕ್ಕೆ ಲಸಿಕೆ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ರಫ್ತು ಮಾಡಲು ಅವಕಾಶ ಕಲ್ಪಿಸಿತ್ತು.

Comments