ಬಿ.ಎಸ್ ಯಡಿಯೂರಪ್ಪ ಕರ್ನಾಟಕ ರಾಜ್ಯದ ಅಮೂಲ್ಯ ರತ್ನ ಹಾಗೂ ಕರ್ನಾಟಕ ರಾಜ್ಯದ ಹಾಲಿ ಮುಖ್ಯಮಂತ್ರಿ. ಬಿ.ಎಸ್ ಯಡಿಯೂರಪ್ಪ ಒಂದು ಮಾತು ಹೇಳಿದರೆ ಅದರಲ್ಲಿರುವ ಶಕ್ತಿ ಹಾಗೂ ತಾಕತ್ತು ಏನು ಎಂಬುದು ಮೋದಿ ಹಾಗೂ ಅಮಿತ್ ಶಾ ಅವರಿಗೂ ತಿಳಿದಿದೆ. ಅದರೆ ಇಂತಹ ಮಹನ್ನೋತ್ತ ನಾಯಕನ ವಿರುದ್ದ ಒರ್ವ ಪಕ್ಷಾಂತರಿ ನಾಯಕ ಹಾಗೂ ಅದೇ ಸಂಪುಟದಲ್ಲಿರುವ ಸಚಿವ ಸಿ.ಪಿ ಯೋಗೇಶ್ವರ್ ಅವರ ಮಾತಿಗೆ ಇಡೀ ರಾಜ್ಯದ ಜನರು ವಿರೋದ ವ್ಯಕ್ತಪಡಿಸುತ್ತಿದ್ದಾರೆ. ಮಾತ್ರವಲ್ಲದೆ ಈ ಎಲ್ಲಾ ಬೇಳವಣಿಗೆಗಳಿಂದಾಗಿ ರಾಜ್ಯ ಬಿಜೆಪಿ ಭಾರೀ ಹಿನ್ನಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಎಲ್ಲಾ ಅಂಶಗಳು ರಾಜ್ಯ ರಾಜಕೀಯ ಮಹತ್ವದ ಹಾಗೂ ವಿಶೇಷ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಸಿ.ಪಿ ಯೋಗಿಶ್ವರ್ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪರ ನಾಯಕತ್ವದ ಬಗ್ಗೆ ಮತನಾಡಿರುವುದು ಇಡೀ ರಾಜ್ಯಾದ್ಯಾಂತ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಾತ್ರವಲ್ಲದೆ ಈ ಬೆಳವಣಿಗೆ ಪಕ್ಷ ಹಾಗೂ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಸದ್ಯ ಸಿ.ಪಿ ಯೋಗಿಶ್ವರ್ ಮಾಡಿದ ತಪ್ಪಿಗೆ ದೊಡ್ಡ ಶಿಕ್ಷೆಯನ್ನು ಎದುರಿಸಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಬಿ.ಎಸ್ ಯಡಿಯೂರಪ್ಪ ಸಂಪುಟದ ಇತರ ಸಚಿವರ ಯಡಿಯೂರಪ್ಪ ಅವರಿಗೆ ಬೆಂಬಲವಾಗಿ ನಿಂತಿದ್ದು ಯೋಗಿಶ್ವವರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಯೋಗಿಶ್ವರ್ ಅವರು ಮಾಡಿದ ತಪ್ಪಿಗೆ ಸಂಪುಟದಿಂದ ವಜಾಗೊಳ್ಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
Comments
Post a Comment