ಹಾವುಗಳು ಎಂದರೆ ಎಂತಹ ಧೈರ್ಯಶಾಲಿಗಳು ಕೂಡ ಒಂದು ಸಲ ಹೆದರಿಬಿಡುತ್ತಾರೆ ಯಾಕೆಂದರೆ ಹಾವುಗಳಲ್ಲಿರು ವಿಷ ಅಂತಹದ್ದು ಒಂದು ಸಲ ವ್ಯಕ್ತಿಗೆ ಹಾವು ಕಡೆದರೆ ಅದರ ವಿಷ ಆ ವ್ಯಕ್ತಿಯ ದೇಹ ಸೇರಿದರೆ ಸಾವಿನ ದವಡೆಗೆ ಹೋಗಿ ಬರಬೇಕಾಗುತ್ತದೆ. ದೈತ್ಯ ಹಾವುಗಳನ್ನು ನೋಡಿದಾಗ ಒಂದು ಬಾರಿ ನಮ್ಮ ಮೈ ಜುಮ್ಮೆನಿಸುತ್ತದೆ. ಕರಾವಳಿಯ ಬೆಳ್ತಂಗಡಿ ಭಾಗದಲ್ಲಿ ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ರೋಚನ ವಿಡಿಯೋ ಒಂದು ಸದ್ಯ ವೈರಲ್ ಆಗಿದೆ.
ಕಾಳಿಂಗ ಸರ್ಪವೆಂದರೆ ಎಲ್ಲಾರೂ ಬೆಚ್ಚಿಬೀಳುತ್ತಾರೆ. ಏಕೆಂದರೆ ಹಾವುಗಳಲ್ಲಿ ಅತ್ಯಂತ ಹೆಚ್ಚು ವಿಷಪೂರಿತ ಹಾವು ಇದಾಗಿದೆ. ಇದರ ವಿಷವೂ ಅತ್ಯಂತ ಕಾರ್ಕೋಟ ವಿಷವಾಗಿದ್ದು ಕಾಳಿಂಗ ಸರ್ಪ ಒಂದು ಬಾರಿ ಕಡಿದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದಿದ್ದರೆ ಬದುಕುವ ಸಂಧರ್ಭ ಬಹಳ ಕಡಿಮೆ. ಹೆಬ್ಬಾವು ಒಂದು ರೀತಿಯ ದೈತ್ಯ ಹಾವಾಗಿದ್ದು ವಿಷ ರಹಿತ ಹಾವಾಗಿರುತ್ತದೆ. ಯಾವುದೇ ಜೀವಿಗಳನ್ನು ಸಲಿಸಾಗಿ ನುಂಗುವ ಹೆಬ್ಬಾವನ್ನು ಕಾಳಿಂಗ ಸರ್ಪ ನುಂಗಿದೆ.
ದೈತ್ಯ ಹೆಬ್ಬಾವನ್ನು ನುಂಗಿದ ಬಳಿಕ ಕಾಳಿಂಗ ಸರ್ಪಕ್ಕೆ ಮುಂದೆ ಹೋಗಲು ಸಾಧ್ಯವಾಗದೆ ಇದುದರಿಂದ ಅದನ್ನು ವಾಂತಿ ಮಾಡಿದೆ. ಮಾತ್ರವಲ್ಲದೆ ಹೆಬ್ಬಾವು ಸಾವನ್ನಪ್ಪಿದೆ. ಈ ಭಯಾನಕ ವಿಡಿಯೋ ಶೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾತ್ರವಲ್ಲದೆ ಕರಾವಳಿಯಲ್ಲಿ ಈ ವಿಡಿಯೋ ವೈರಲ್ ಆಗಿದೆ. ಬೆಳ್ತಂಗಡಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯ ಉರಗ ತಜ್ನರೊಬ್ಬರು ಕಾಳಿಂಗ ಸರ್ಪವನ್ನು ಕಾಡಿಗೆ ಬಿಟ್ಟಿದ್ದಾರೆ.
Comments
Post a Comment