ನಾಯಿಯನ್ನು ಪ್ರೀತಿಯಿಂದ ಮುದ್ದಾಡುವ ಬೆಕ್ಕಿನ ಅಪರೂಪದ ದೃಶ್ಯಕ್ಕೆ ನೆಟ್ಟಿಗರು ಫಿಧಾ: ವೈರಲ್ ವಿಡಿಯೋ

ಪ್ರಕೃತಿಯಲ್ಲಿ ಅತ್ಯಂತ ಸುಂದರ ಹಾಗೂ ಸುಮಧುರ ದೃಶ್ಯವೆಂದರೆ ಅದುವೇ ಪ್ರೀತಿ. ಪ್ರಾಣಿ-ಪಕ್ಷಿಗಳ ಪ್ರೀತಿ, ಮನುಷ್ಯ-ಮನುಷ್ಯರ ಪೀತಿ ಇದು ಯಾವುದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಪ್ರೀತಿಗೆ ಯಾವುದೇ ಬೌಂಡರಿಯಿಲ್ಲ. ನಿಜವಾದ ಪ್ರೀತಿಯಲ್ಲಿ ಯಾವುದೇ ಕಲ್ಮಶವಿರುವುದಿಲ್ಲ ಮಾತ್ರವಲ್ಲದೆ ಅದು ಅತ್ಯಂತ ವಿಶಿಷ್ಠ ಹಾಗೂ ವಿಶೇಷವಾದ ಅನುಭವಾಗಿರುತ್ತದೆ. ಅದರಲ್ಲೂ ಪ್ರಾಣಿಗಳ ನಡುವಿನ ಪ್ರೀತಿಯನ್ನು ಅಷ್ಟು ಸುಲಭವಾಗಿ ವರ್ಣಿಸಲು ಸಾಧ್ಯವಿಲ್ಲ. ಶೋಷಿಯಾಲ್ ಮೀಡಿಯಾದಲ್ಲಿ ಅದೆಷ್ಟೋ ಪ್ರಾಣಿಗಳ ಮುದ್ದಾದ ಪ್ರೀತಿಯ ವಿಡಿಯೋ ವೈರಲ್ ಆಗಿದೆ.

ನಾಯಿ ಹಾಗೂ ಬೆಕ್ಕಿನ ಪ್ರೀತಿಯ ವಿಡಿಯೋ ಸದ್ಯ ಸಮಾಜೀಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಫಿಧಾ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸುಮಾರು 12 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಬಂದಿವೆ. 


ವೈರಲ್ ಆಗಿರುವ ವಿಡಿಯೋದಲ್ಲಿ ಮುದ್ದಾದ ಬೆಕ್ಕು ತನ್ನ ಗೆಳೆಯನಾದ ನಾಯಿ ಮರಿಯನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಈ ವಿಡಿಯೋ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿಯ ಮುದ್ದಾದ ವಿಡಿಯೋವನ್ನು ನೀವೂ ಮಿಸ್ ಮಾಡಿಕೊಳ್ಳಬೇಡಿ ತಪ್ಪದೇ ವಿಡಿಯೋ ನೋಡಿ ಹಾಗೂ ಶೇರ್ ಮಾಡಿ.

Comments