ವಿಶ್ವದಲ್ಲಿರುವ ಪೂರ್ತಿ ಜನಸಂಖ್ಯೆಗೆ ಕೊವೀಡ್ ಲಸಿಕೆ ನೀಡಲು ಎಷ್ಟು ವರ್ಷ ಬೇಕಾಗುತ್ತೆ ಗೊತ್ತಾ.?

ವಿಶ್ವದಲ್ಲಿಯೇ ಕರೋನಾದ ಆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ವಿಶ್ವದ ಬಹುತೇಕ ರಾಷ್ಟ್ರಗಳು ಲಸಿಕೆಗಾಗಿ ಬೇಡಿಕೆ ಇಡುತ್ತಿದೆ. ಭಾರತದಲ್ಲಿಯೂ ಕೋವಿಶಿಲ್ದ್ ಹಾಗೂ ಕೊವಾಕ್ಸಿನ್ ಲಸಿಕೆಗಳು ಈಗಾಗಲೇ ಬಳಕೆಗೆ ಅನುಮತಿಯನ್ನು ನೀಡಿದೆ. ವ್ಯಾಕ್ಸಿನ್ ಗಾಗಿ ಮುಗಿಬಿದ್ದ ಸಂಬಂಧ ಸಿರಾಮ್ ಇನ್ ಸ್ಟಿಟ್ಯೂಟ್ ಅಫ್ ಟೆಕ್ನಾಲಾಜಿಯ ಸಿಇಒ ಅಧಾರ್ ಪೂನಾವಾಲಾ ಒತ್ತಡಕ್ಕೆ ಒಳಗಾಗಿ ಭಾರತ ತೊರೆದು ಲಂಡನ್ ಸೇರಿದ್ದಾರೆ. ಈ ನಡುವೆ ಮಹತ್ವದ ಮಾಹಿತಿಯೊಂದನ್ನು ಅಧಾರ್ ಹೇಳಿದ್ದಾರೆ.

ವಿಶ್ವದ ಜನರಿಗೆ ಲಸಿಕೆ ನೀಡುವುದು ಸಾಮಾನ್ಯವಾದ ಪ್ರಕ್ರಿಯೆಯಲ್ಲ ಬದಲಾಗಿ ಇದು ಬಹಳ ಕಷ್ಟದ ಕೆಲಸ ಮತ್ತು ಇದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದ್ದರಿಂದ ಇಡೀ ವಿಶ್ವದ ಜನರಿಗೆ ಲಸಿಕೆ ನೀಡಲು ಸುಮಾರು 2 ರಿಂದ 3 ವರ್ಷಗಳ ಸಮಯ ಬೇಕು ಇದು ಒಂದು ಬಹುದೊಡ್ಡ ಪ್ರಕ್ರಿಯೆ ಎಂದು ಪೂನಾವಾಲ ಹೇಳಿದ್ದಾರೆ.


Comments