ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಒಬ್ಬರು ದೇಶದ್ಯಾಂತ ಸುದ್ದಿಯಾಗಿದ್ದಾರು ಎಂದರೆ ಅದು ರಮೇಶ್ ಕುಮಾರ್. ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಮ್ಮೀಶ್ರ ಸರ್ಕಾರ ರಚನೆ ಮಾಡಿದ ಸಂಧರ್ಭದಲ್ಲಿ ಶಾಸಕರ ರಾಜೀನಾಮೆಯ ಮೂಲಕ ಸುಪ್ರೀಂ ಕೋರ್ಟ ನಲ್ಲಿ ಸುದ್ದಿಯಾಗಿದ್ದ ರಮೇಶ್ ಕುಮಾರ್, ಕರ್ನಾಟಕ ರಾಜ್ಯದ ಹಿರಿಯ ಹಾಗೂ ಅತ್ಯಂತ ಕರಾರುವಕ್ಕು ರಾಜಕಾರಣಿ.
ರಮೇಶ್ ಕುಮಾರ್ ಅವರು ಅತ್ಯಂತ ಮೌಲ್ಯಯುತ ರಾಜಕಾರಣಿ ಎಂಬುದು ಎಲ್ಲಾ ಪಕ್ಷದವರ ಆನಿಸಿಕೆ ಸದ್ಯ ಮಾಜಿ ಸ್ಪೀಕರ್ ಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ರಾಜ್ಯದಲ್ಲಿ ಕರೋನಾ ಹೆಚ್ಚುತ್ತಿರುವ ಸಂಧರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಬೇಕು ಎಂದು ರಮೇಶ್ ಕುಮಾರ್ ಹಾಗೂ ಇತರ ಇಬ್ಬರ್ಯ್ ಶಾಸಕರು ಹೈಕೋರ್ಟ್ ಗೆ ಮನವಿ ಮಾಡಿದ್ದರು.
ಕರ್ನಾಟಕ ರಾಜ್ಯದ ಶಾಸಕರ ಈ ಮನವಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯನ್ಯಾಯಮೂರ್ತಿಗಳು ಇದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ನೀವೂ ಎಲ್ಲಾ ಉತ್ತಮ ಪರಿಸ್ಥಿತಿಯಲ್ಲಿದ್ದ ಸಂಧರ್ಭದಲ್ಲಿ ಎಷ್ಟು ಜನರಿಗೆ ತುರ್ತು ಸಂಧರ್ಭದಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ಇದು ಮೂವರು ಕಾಂಗ್ರೆಸ್ ಶಾಸಕರಿಗೆ ಛೀಮಾರಿ ಹಾಕಿದಂತಾಗಿದೆ.
Comments
Post a Comment