ಭಾರತ ದೇಶ ಸದ್ಯ ಕರೋನಾದ ಮಹಾಮಾರಿಗೆ ತತ್ತರಿಸಿ ಹೋಗಿದೆ. ಭಾರತ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ದೇಶಿಯ ಔಷಧಿಯನ್ನು ನೀಡಿ ಭಾರತದ ವಿಶ್ವದ ಎಲ್ಲಾ ರಾಷ್ಟ್ರಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಮಾತ್ರವಲ್ಲದೆ ಈ ಕ್ರಮ ಭಾರೀ ಮೆಚ್ಚುಗೆ ಪಾತ್ರವಾಗುವುದರ ಜೊತೆಗೆ ಹನುಮಂತನ ರೀತಿಯಲ್ಲಿ ಸಂಜೀವಿನಯಾಗಿ ಕೆಲಸ ಮಾಡಿದೆ ಎಂಬ ಮೆಚ್ಚುಗೆಗೆ ಪಾತ್ರವಾಗಿತ್ತು ಸದ್ಯ ಭಾರತದಲ್ಲಿಯೇ ಲಸಿಕೆಯ ಕೊರತೆ ಉಂಟಾಗಿದೆ.
ಭಾರತ ಸರ್ಕಾರದ ಆದೇಶದ ಪ್ರಕಾರ ಈಗಾಗಲೇ 18 ರಿಂದ 45 ವರ್ಷದ ವಯೋಮಾನದ ಎಲ್ಲಾರಿಗೂ ಲಸಿಕೆ ನೀಡಲೂ ಅದೇಶಿಸಲಾಗಿದೆ ಅದರೆ ಲಸಿಕಾ ತಯಾರಿಕ ಕಂಪೆನಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ಇಲ್ಲದಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂಬುದು ಎಲ್ಲಾರಿಗೂ ತಿಳಿದಿದೆ. ಸದ್ಯ ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಕರೋನಾವನ್ನು ನಾಶಪಡಿಸಲು ಲಸಿಕೆ ಪ್ರಮುಖ ಆಸ್ತ್ರವಾಗಿದ್ದು ಅದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಲಸಿಕೆ ನೀಡಿದ ಗ್ರಾಪ್ ನೋಡಿದರೆ ಅದು ನಿರೀಕ್ಷಿತ ಮಟ್ಟದಲಿಲ್ಲ ಎಂಬುದು ತಿಳಿಯುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಎಲ್ಲಾದರ ನಡುವೆ ಕೇಂದ್ರ ಸರ್ಕಾರಕ್ಕೆ ಕರೋನಾಗೆ ಲಸಿಕೆ ನೀಡುವಲ್ಲಿ ಯಾವುದೇ ಜವಾಬ್ದಾರಿಇ ಅಥವಾ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
Comments
Post a Comment