ಕರೋನಾದ ಆರ್ಭಟದ ನಡುವೆಯೇ ಭರವಸೆ ಹುಟ್ಟಿಸುವ ಒಂದು ವಿಡಿಯೋ ವೈರಲ್

’ಕರೋನಾ’ ಈ ಪದವನ್ನು ಕೇಳಿದ ತಕ್ಷಣ ಜನ ಒಂದು ಬಾರಿ ಬೆಚ್ಚಿಬೀಳುತ್ತಾರೆ. ಮೊದಲನೇ ಆಲೆಗೆ ತತ್ತರಿಸಿ ಹೋಗಿದ್ದ ಭಾರತಕ್ಕೆ ಎರಡನೇ ಆಲೆ ಮತ್ತೊಂದು ಹೊಡೆತ ನೀಡುವ ಮೂಲಕ ಭಾರೀ ತೊಂದರೆಗೆ ಒಳಗಾಗುವಂತೆ ಮಾಡಿದೆ. ಈ ಎಲ್ಲಾದರ ನಡುವೆ ಕರೋನಾವನ್ನು ಓಡಿಸಲು ಅಸ್ತ್ರವಾಗಿರುವ ಕೆಲವೊಂದು ಅಂಶಗಳ ಬಗ್ಗೆ ನಾವು ತಿಳಿಯೋಣ

ಕರೋನಾದಿಂದ ಪಾರಾಗಲು ನಾವೂ ಮಾಡಬೇಕಾದ ಪ್ರಮುಖ ಅಂಶಗಳೆಂದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಸರಿಯಾದ ಸಮಯಕ್ಕೆ ಚುಚ್ಚುಮದ್ದು ಹಾಕಿಸಿಕೊಳ್ಳುವುದು. ಸದ್ಯ ಇದು ಒಂದು ದಿನಚರಿಯಾಗಿ ಮಾರ್ಪಡಾಗಿದೆ. ಮಾತ್ರವಲ್ಲದೆ ಸದ್ಯ ಕರೋನಾದಿಂದ ತತ್ತರಿಸಿ ಹೋಗಿರುವ ಜನತೆಗೆ ಒಂದು ಭರವಸೆ ಹುಟ್ಟಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Comments