ಪ್ರಪಂಚದಲ್ಲಿ ಆಳಿದು ಹೋಗಿರುವ ಪ್ರಾಣಿ ಸಂತಗಳಲ್ಲಿ ಡೈನೋಸಾರ್ ಕೂಡ ಒಂದು. ಚಲನಚಿತ್ರಗಳಲ್ಲಿ ಡೈನೋಸಾರ್ ಜೀವಿಗಳನ್ನು ನಾವು ನೋಡಿ ಹೆದರಿರಬಹುದು. ಅದರೆ ಡೈನೋಸಾರ್ ರೀತಿಯ ಜೀವಿಗಳು ಈಗಲು ಬದುಕಿದ್ದವೆ ಎಂದರೆ ನೀವೂ ನಂಬುವಿರಾ.? ಹೌದು ನೀವೂ ನಂಬಲೆಬೇಕು, ಡೈನೋಸಾರ್ ರೀತಿಯ ವಿಶಿಷ್ಟ ಜೀವಿಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮನಕುಲದಲ್ಲಿ ಡೈನೋಸಾರ್ ಇನ್ನೂ ಬದುಕಿದೆಯಾ ಎಂಬ ಪ್ರಶ್ನೆಗಳು ಉದ್ಬಾವಾಗುತ್ತದೆ.
ಡೈನೋಸಾರ್ ರೀತಿಯ ಜೀವಿ ಕಂಡ ಮಹಿಳೆಯ ಹೆಸರು ಕ್ರಿಶ್ಚಿಯನಾ ರಯಾನ್. ನವದೆಹಲಿಯಲ್ಲಿ ವಾಸವಾಗಿರುವ ಈ ಮಹಿಳೆಯ ಮನೆಯ ಹಿತ್ತಲಲ್ಲಿ ಈ ಜೀವಿ ಕಾಣಿಸಿಕೊಂಡಿದ್ದು ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು ಸಾಮಾಜೀಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಚಿತ್ರ ಜೀವಿಯನ್ನು ಕಂಡು ಮಹಿಳೆ ಗಾಬರಿಗೊಂಡಿದ್ದು ಅಕ್ಕ ಪಕ್ಕದ ಎಲ್ಲಾ ನಿವಾಸಿಗಳಿಗೂ ವಿಷಯ ತಿಳಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋವನ್ನು ನೋಡಿ ನೆಟ್ಟಿಗರು ಒಂದು ಬಾರಿ ಹೌಹಾರಿದ್ದಾರೆ. ಮಾತ್ರವಲ್ಲದೆ ಇದು ನವಿಲು ಎಂದು ಕೆಲವರು ವಾದಿಸಿದ್ದರೆ. ಇನ್ನೂ ಕೆಲವರು ತಲೆಗೆ ಬಕೆಟ್ ಹಾಕಿಕೊಂಡು ಓಡಿರುವ ಪ್ರಾಣಿ ಎಂದು ವಾದಿಸಿದ್ದಾರೆ. ಒಟ್ಟಾರೆಯಾಗಿ ನೋಡಲು ಇದು ಡೈನೋಸಾರ್ ರೀತಿಯ ಜೀವಿ ಕಂಡಿದ್ದು, ಇದು ನಿಜವಾಗಿಯೂ ಡೈನೋಸಾರ್ ಪ್ರಾಣಿಯೇ ಎಂಬ ಪ್ರಶ್ನೆಗಳು ಮೂಡಿವೆ. ನೀವೂ ಕೂಡ ವಿಡಿಯೋ ನೋಡಿ ಯಾವ ಪ್ರಾಣಿ ಎಂದು ಕಮೆಂಟ್ ಮೂಲಕ ತಿಳಿಸಿ.
Comments
Post a Comment