ಯಡಿಯೂರಪ್ಪ ಮೊಗದಲ್ಲಿ ಮಂದಹಾಸ ಮೂಡಿಸಿದ ಸಚಿವ ಮುರುಗೇಶ್ ನಿರಾಣಿಯವರ ಆ ಒಂದು ಮಾತು

ಯಡಿಯೂರಪ್ಪ ರಾಜ್ಯ ರಾಜಕೀಯದ ಅತ್ಯಂತ ಪ್ರಭಾವಿ ನಾಯಕ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ನಾಯಕರಲ್ಲಿ ಯಡಿಯೂರಪ್ಪ ಕೂಡ ಒಬ್ಬರು. ಇಳಿ ವಯಸ್ಸಿನಲ್ಲಿಯೂ ಸದಾ ಚಿರಯುವಕನಂತಿರುವ ಉತ್ಸಾಹ ಯಡಿಯೂರಪ್ಪನವರನ್ನು ಇಂದು ಕೂಡ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಿದೆ. 


ಬಿಜೆಪಿಯ ಒಂದು ನಿರ್ಧಾರದ ಪ್ರಕಾರ 75 ವರ್ಷದ ದಾಟಿದ ಯಾವ ವ್ಯಕ್ತಿಯೂ ಕೂಡ ಉನ್ನತ  ಹುದ್ದೆಯಾದ ಮುಖ್ಯಮಂತ್ರಿ ಸ್ಥಾನವನ್ನು ಆಲಂಕರಿಸುವಂತಿಲ್ಲ ಅದರೆ ಕರ್ನಾಟಕ ರಾಜಕೀಯದ ಮುತ್ಸಾದ್ದಿ ನಾಯಕ ಮಾತ್ರ ಮುಖ್ಯಮಂತ್ರಿ ಸ್ಥಾನದಲ್ಲಿದ್ದರೆ, ಈ ಕಾರಣಕ್ಕೆ ಈ ಸ್ಥಾನದಿಂದ ಅವರನ್ನು ಕೆಳಗಿಳಿಸಿ, ನಾಯಕತ್ವ ಬದಲಾವಣೆ ಮಾಡಬೇಕು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾರೀ ಕೇಳಿ ಬರುತ್ತಿದೆ.

ಕರ್ನಾಟಕ ರಾಜ್ಯದ ನಾಯಕತ್ವ ಬದಲವಣೆಉಅ ಬಗ್ಗೆ ಬಿಜೆಪಿ ಹೈಕಮಾಂಡ್ ಯಾವುದೇ ಮಾಹಿತಿಯನ್ನು ಇಲ್ಲಿಯವರೆಗೂ ನೀಡಿಲ್ಲ ಅದರೆ ಕರ್ನಾಟಕ ರಾಜ್ಜದ ಗಣಿ ಸಚಿವ ಮುರುಗೇಶ್ ನಿರಾಣಿ ಯಾವುದೇ ಕಾರಣಕ್ಕೆ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯಿಲ್ಲ ಬದಲಾಗಿ ಮುಂದಿನ ಎರಡು ವರ್ಷ ಅವರೇ ಈ ರಾಜ್ಯದ ಮುಖ್ಯಮಂತ್ರಿ ಎಂದು ತಿಳಿಸಿದ್ದಾರೆ. ಈ ಮಾತು ಯಡಿಯೂರಪ್ಪ ಬೆಂಬಲಿಗರಿಗೆ ಖುಷಿ ನೀಡಿದೆ.

Comments