ರಾಜ್ಯದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂಧರ್ಭದಲ್ಲಿ, ಕರೋನಾದ ಚೈನ್ ಲಿಂಕ್ ಕಡಿತಗೊಳಿಸಲು ರಾಜ್ಯ ಸರ್ಕಾರ ಈಗಾಗಲೇ ಕಠಿಣ ಲಾಕ್ ಡೌನ್ ಘೋಷಿಸಿದೆ. ಕರೋನಾದ ವಿರುದ್ದ ಹೋರಾಡಲು ಜನತೆಯ ಸ್ಪಂದನೆ ಅತ್ಯಗತ್ಯ ಎಂಬುದನ್ನು ಈಗಾಗಲೇ ಸರ್ಕಾರ ಜನತೆಗೆ ತಿಳಿಸಿದೆ. ತುರ್ತು ಸಂಧರ್ಭದಲ್ಲಿ ಮಾತ್ರ ಜನ ಮನೆಯಿಂದ ಹೊರಬರಬೇಕು ಎಂದು ಕೇಳಿಕೊಂಡಿದೆ. ಈ ನಡುವೆ ಲಾಕ್ ಡೌನ್ ಘೋಷಣೆಯಾಗದಗಿನಿಂದ ನಗರ ಪ್ರದೇಶದಿಂದ ಹಌಗೆ ಜನರು ವಲಸೆ ಹೋಗಲು ಪ್ರಾರಂಭಿಸಿದರು.
ನಗರವಾಸಿಗಳು ತಮ್ಮ ಊರಿಗೆ ಪ್ರಯಾಣ ಬೆಳೆಸಿರುವುದು ಸರ್ಕಾರಕ್ಕೆ ಅತಂಕ ತಂದೊಡ್ಡಿತ್ತು ಮಾತ್ರವಲ್ಲದೆ ನಗರದಲ್ಲಿಯೇ ಇರೀ ಎಂದು ಜನರಲ್ಲಿ ಕೇಳಿಕೊಂಡಿತ್ತು ಕಾರಣ ಕೊರೋನಾವನ್ನು ಗ್ರಾಮೀಣ ಪ್ರದೇಶಗಳಿಗೆ ಪಸರಿಸಬಹುದು ಎಂದು ಸರ್ಕಾರ ಭಯಗೊಂಡಿತ್ತು ಅದರೆ ಸರ್ಕಾರದ ಭಯದಂತೆ ಸದ್ಯ ಗ್ರಾಮೀಣ ಪ್ರದೇಶಗಳಿಗೂ ಕರೋನಾ ಪಸರಿಸುತ್ತಿದೆ ಎಂದು ವರದಿಯಾಗುತ್ತಿದೆ.
ಒಂದು ಕಡೆ ಗ್ರಾಮೀಣ ಭಾರತಕ್ಕೆ ಕರೋನಾ ಪಸರಿಸುತ್ತಿದೆ ಎಂಬ ಚಿಂತೆಯ ನಡುವೆ ಶಾಸಕರು ಹಾಗೂ ಸಂಸದರುಗಳು ತಮ್ಮ ಕ್ಷೇತ್ರವನ್ನು ಮರೆತು ಬೆಂಗಳೂರಲ್ಲಿ ಟೀಕಾಣಿ ಹೂಡಿದ್ದಾರೆ ಎಂದು ಕ್ಷೇತ್ರದ ಮತದಾರರು ಆರೋಪ ಮಾಡುತ್ತಿದ್ದಾರೆ ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಾ ಶಾಸಕರು ಹಾಗೂ ಸಂಸದರಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಎಲ್ಲಾ ಶಾಸಕರು ಹಾಗೂ ಸಂಸದರು ನಿಮ್ಮ ಕ್ಷೇತ್ರದಲ್ಲಿ ನೆಲೆಸಿ ಹಾಗೂ ಜನರ ಸಮಸ್ಯೆಗಳನ್ನು ಆಲಿಸಿ ಕರೋಣದ ವಿರುದ್ದ ಹೋರಾಟದಲ್ಲಿ ಕೈ ಜೋಡಿಸಿ ಎಂದು ಹೇಳಿದ್ದಾರೆ.
Comments
Post a Comment