ಕೊರೋನಾ ಎಂಬ ಮಹಾಮಾರಿ ಇಡೀ ಮನಕುಲವನ್ನೇ ಹಿಂಡಿ ಹಿಪ್ಪೆಮಾಡುತ್ತಿದೆ. ಕೊರೋನಾದ ಈ ರುದ್ರ ನರ್ತನದಲ್ಲಿ ಹಣ, ಆಸ್ತಿ, ಸಂಪತ್ತುಗಳಿಗೆ ಯಾವುಉದೇ ಬೆಲೆ ಇಲ್ಲ ಬದಲಾಗಿ ಮಾನವೀಯತೆ ಹಾಗೂ ಜೀವಕ್ಕೆ ಮಾತ್ರ ಬೆಲೆ. ಕೊರೋನಾ ಸೋಂಕಿಗೆ ಬದವ ಶ್ರೀಮಂತ ಎಂಬ ಯಾವುದೇ ಭೇದ-ಭಾವವಿಲ್ಲ ಬದಲಾಗಿ ಭೂಮಿಯಲ್ಲಿರುವ ಮನುಷ್ಯರೆಲ್ಲರು ಒಂದೇ ಎನ್ನುವ ಸತ್ಯವನ್ನು ಮತ್ತೊಮ್ಮೆ ಸಾರುತ್ತಿದೆ. ಅ-ನ್ಯಾ-ಯ ಆಕ್ರಮಗಳಿಂದಾಗಿ ಈ ಭೂಮಿ ಮೇಲೆ ಅಟ್ಟಹಾಸ ಮೇರೆಯುತ್ತಿದ್ದ ಮಾನವ ಸದ್ಯ ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುವ ಪರಿಪಾಠವನ್ನು ರೂಪಿಸಿಕೊಂಡಿದ್ದಾನೆ, ಮಾತ್ರವಲ್ಲದೆ ಹಣದಿಂದ ಯಾವುದು ಸಾಧ್ಯವಿಲ್ಲ ಎಂಬುದು ಎಲ್ಲಾರಿಗೂ ಮನದಟ್ಟಾಗಿರುವ ಸತ್ಯ.
ಕೊರೋನಾ ತನ್ನ ರುದ್ರ ನರ್ತನವನ್ನು ಮುಂದುವರಿಸುತ್ತಿದೆ. ಭಾರತ ಕೊರೋನಾದ ಎರಡನೇ ಆಲೆಗೆ ತತ್ತರಿಸಿ ಹೋಗಿದೆ. ಮಾತ್ರವಲ್ಲದೆ ಆಕ್ಸಿಜನ್ ಹಾಗೂ ಬೆಡ್ ಗಳ ಸಮಸ್ಯೆ ಎದುರಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಭಾರತಕೆ ಸಹಾಯಹಸ್ತ ಚಾಚುತ್ತಿದೆ. ಸದ್ಯ ಕೋವಿಡ್ ನಿಧಿಗಾಗಿ ಬಡ ಬೀಡಿ ಕಾರ್ಮಿಕರೊಬ್ಬರು ನೀಡಿದ ಸಹಾಯ ದೇಶವ್ಯಾಪಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲದೆ ಒರ್ವ ಬಡ ಕಾರ್ಮಿಕ ಇಷ್ಟು ಮೊತ್ತದ ಹಣವನ್ನು ನೀಡಿರುವುದು ಎಲ್ಲಾರಿಗೂ ಆಶ್ಚಯವನ್ನು ಉಂಟು ಮಾಡಿದೆ.
ಕೊರೋನಾ ಸೋಂಕಿಗೆ ಎಲ್ಲಾ ರಾಜ್ಯಗಳು ಈಗಾಗಲೇ ತತ್ತರಿಸಿ ಹೋಗಿದೆ.. ಪ್ರತಿ ರಾಜ್ಯಗಳು ಕೂಡ ಕೊರೋನಾದ ವಿರುದ್ದ ಹೋರಾಡಲು ವಿವಿಧ ಆಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಈ ನಡುವೆ ಎಲ್ಲಾರಿಗೂ ಉಚಿತ ವ್ಯಾಕ್ಸಿನ್ ನೀಡುವ ಉದ್ದೇಶದಿಂದ ಕೇರಳ ರಾಜ್ಯ ವ್ಯಾಕ್ಸಿನ್ ಚಾಲೆಂಜ್ ಆರಂಭಿಸಿದೆ. ಮಾತ್ರವಲ್ಲದೆ ಇದಕ್ಕೆ ಕೇರಳ ರಾಜ್ಯದ ಎಲ್ಲಾ ಸೆಲೆಬ್ರೆಟಿಗಳು ಧನಸಹಾಯವನ್ನು ನೀಡುತ್ತಿದ್ದಾರೆ. ಸದ್ಯ ಬಡ ಕಾರ್ಮಿಕರೊರ್ವರು ನೀಡಿದ ಸಹಾಯ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕೇರಳ ರಾಜ್ಯದ ಕಣ್ಣೂರಿನ ಜನಾರ್ಧನನ್ ಎಂಬುವವರು ವ್ಯಾಕ್ಸಿನ್ ಚಾಲೆಂಜ್ ಗೆ 2 ಲಕ್ಷ ರೂಪಾಯಿ ನೀಡುವ ಮೂಲಕ ಭಾರೀ ಪ್ರಶಂಶೆಗೆ ಪಾತ್ರರಾಗಿದ್ದರೆ. ಬಡ ಬೀಡಿ ಕಾರ್ಮಿಕರಾಗಿರುವ ಜನಾರ್ಧನನ್ ವಿಶೇಷ ಚೇತನರಾಗಿದ್ದರೆ. ಪತ್ನಿಯನ್ನು ಕಳೆದುಕೊಂಡು ಏಕಾಂಗಿಯಾಗಿರುವ ಇವರು ಪೆನ್ಷನ್ ಹಾಗೂ ಬೀಡಿ ಕೆಲಸದಿಂದ ಉಳಿಸುವ ಹಣದಿಂದ ಸುಮಾರು 2 ಲಕ್ಷ ರೂಪಾಯಿಯನ್ನು ಕೋವ್ಯಾಕ್ಸಿನ್ ಚಾಲೆಂಜ್ ಗೆ ನೀಡಿದ್ದಾರೆ. ಇಂತಹ ಮೌಲ್ಯಯುತ ಕಾರ್ಯಗಳನ್ನು ಎಲ್ಲಾರಿಗೂ ತಲುಪಿಸಲು ಕೂಡಲೇ ಶೇರ್ ಮಾಡಿ.
Comments
Post a Comment