ಇದೀಗ ಬಂದ ಸುದ್ದಿ: ಬಿಜೆಪಿಯೊಂದಿಗೆ ಪಕ್ಷ ವಿಲೀನಗೊಳಿಸಲು ಸಜ್ಜಾದ ದಕ್ಷಿಣ ಭಾರತದ ಪ್ರಮುಖ ಪಾರ್ಟಿ.!

ಭಾರತ ದೇಶದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಪಕ್ಷದ ಸಾಧನೆಯನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವ ಸಮಯ. ಹಳ್ಳಿಯಿಂದ ದಿಲ್ಲಿಯ ತನಕ ಎಲ್ಲಾ ಕಡೆಯೂ ಒಂದೇ ಪಕ್ಷ ಅದುವೇ ಬಿಜೆಪಿ. ಬಿಜೆಪಿ ಈ ಮಟ್ಟದ ಸಾಧನೆಯನ್ನು ಮಾಡಲು ಬಹಳ ಕಷ್ಟಪಟ್ಟಿದೆ, ಮಾತ್ರವಲ್ಲದೆ ಆನೇಕ ನಾಯಕರು ಹಗಲು ರಾತ್ರಿಯೆನ್ನದೆ ಪಕ್ಷದ ಏಳೀಗೆಗಾಗಿ ಶ್ರಮಿಸಿದರ ಫಲದಿಂದಾಗಿ ಬಿಜೆಪಿ ಇಂದು ಉನ್ನತ ಸ್ಥಾನವನ್ನು ಆಲಂಕರಿಸಲು ಸಾಧ್ಯವಾಗಿದೆ.

ಬಿಜೆಪಿ ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿದರು. ದಕ್ಷಿಣ ಭಾರತದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಅಷ್ಟು ದೊಡ್ಡ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ. ಬಿಜೆಪಿ ತನ್ನ ಮುಂದಿನ ಸಾಧನೆಯನ್ನು ದಕ್ಷಿಣ ಭಾರತದಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಈ ನಡುವೆ ಬಿಜೆಪಿ ಜೊತೆ ತನ್ನ ಪಕ್ಷವನ್ನು ವಿಲೀನಗೊಳಿಸಲು ದಕ್ಷಿಣ ಭಾರೆತದ ಪ್ರಮುಖ ಪಕ್ಷವೊಂದು ಸಜ್ಜಾಗಿದೆ.

ದಕ್ಷಿಣಭಾರತದ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಟಿ.ಡಿ.ಪಿ ತನ್ನ ಆಸ್ತಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಪಕ್ಷವನ್ನು ವಿಲೀನಗೊಳಿಸಲು ಸಜ್ಜಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಮಾತ್ರವಲ್ಲದೆ ಈ ಕಾರಣದಿಂದಾಗಿ ಅಂಧ್ರಪ್ರದೇಶದಲ್ಲಿ ತನ್ನ ಆಸ್ತಿತ್ವವನ್ನು ಕಾಪಾಡುವುದು ಇದರ ಹಿಂದಿನ ರಾಜಕೀಯ ಲೆಕ್ಕಾಚಾರ. ವೈ.ಎಸ್.ಆರ್ ಕಾಂಗ್ರೆಸ್ ನ ವರ್ಚಸ್ಸು ಟಿ.ಡಿ.ಪಿಗೆ ದೊಡ್ಡ ತಲೆನೋವಾಗಿದೆ. ಟಿ.ಡಿ.ಪಿ ಈ ಹಿಂದೆ ಎನ್.ಡಿ.ಎ ಮೈತ್ರಿ ಕೂಟದ ಅಂಗಪಕ್ಷವಾಗಿತ್ತು ಎಂಬುದನ್ನು ಸ್ಮರಿಸಬಹುದು.

Comments