ರಾಜ್ಯ ಬಿಜೆಪಿಯಲ್ಲಿ ಆರಂಭವಾಯ್ತು ರಹಸ್ಯ ಚಟುವಟಿಕೆ.! ಅನುಮಾನ ಮೂಡಿಸಿದ ನಾಯಕರ ನಡೆ

ಕರ್ನಾಟಕ ರಾಜ್ಯದಲ್ಲಿ ಕೊರೋನಾದ ವೇಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಈಗಾಗಲೇ ಲಾಕ್ ಡೌನ್ ಹಾಗೂ ಇನ್ನಿತರ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.. ಈ ನಡುವೆ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆಯಾ ಎಂಬ ಮಾತುಗಳು ಕೇಳಿ ಬರೆಲು ಆರಂಭಿಸಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿ.ಪಿ ಯೋಗಿಶ್ವರ್, ಬಸವರಾಜ್ ಬೊಮ್ಮಾಯಿ ಹಾಗೂ ಬಿ.ವೈ ವಿಜಯೇಂದ್ರ ದೆಹಲಿಗೆ ತೆರಳಿ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ ಆಶ್ವಥ್ ನಾರಯಣ್, ಮುರುಗೇಶ್ ನಿರಾಣಿ, ಪ್ರಹ್ಲಾದ್ ಜೋಶಿ ಹಾಗೂ ಬಿ.ಎಲ್ ಸಂತೋಷ್ ಅವರಿಗೆ ಪಟ್ಟ ಕಟ್ಟುವ ಮಾತುಗಳು ಕೇಳಿ ಬರುತ್ತಿವೆ. ಅದರೆ ಇದು ಯಾವುದು ಅಧಿಕೃತ ಮಾಹಿತಿಗಳಲ್ಲ. ಒಂದು ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ಲಿಂಗಾಯಿತ ಸಮುದಾಯದವರಿಗೆ ಪಟ್ಟ ಕಟ್ಟಬೇಕೆಂದು ಕೂಗು ಕೇಳಿ ಬಂದರೆ ಮುರುಗೇಶ್ ನಿರಾಣಿ ಅವರಿಗೆ ಪಟ್ಟ ಕಟ್ಟುವ ಸಾಧ್ಯತೆ ಹೆಚ್ಚಿದೆ.

ಬಿಜೆಪಿಯ ಹೈಕಮಾಂಡ್ ನ ಅಲಿಖಿತ ನಿಯಮದ ಪ್ರಕಾರ 75 ವಷ ಮೇಲ್ಪಟ್ಟ ಯಾರಿಗೂ ಅಧಿಕಾರದ ಜವಾಬ್ದಾರಿ ನೀಡುವ ಅಧಿಕಾರವಿಲ್ಲ. ಅದರೆ ನಾಯಕತ್ವ ಬದಲಾವಣೆಯಾದರೆ ಯಡಿಯೂರಪ್ಪ ಸೂಚಿಸಿದವರಿಗೆ ಅಧಿಕಾರ ನೀಡಬೇಕು ಎಂಬ ಷರತ್ತು ವಿಧಿಸಿದರೆ ಆಗ ಬಿಜೆಪಿಗೆ ಕಗ್ಗಂಟಾಗಲಿದೆ.

Comments