ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಸುದ್ದಿ ಭಾರೀ ಜೋರಾಗಿ ಹಬ್ಬುತ್ತಿದೆ. ಈ ನಡುವೆ ಪರ ಹಾಗೂ ವಿರೋಧದ ಬಗ್ಗೆ ಬಹಳಷ್ಟು ಮಾಹಿತಿಗಳು ಕೇಳಿ ಬರುತ್ತಿದೆ. ಅದರೆ ನಿಜವಾಗಿಯೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆಯಾ ಎಂಬ ಮಾತಿಗೆ ಅಧಿಕೃತ ಹಾಗೂ ಸ್ಪಷ್ಟವಾದ ಮಾಹಿತಿಯಿಲ್ಲ. ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚಿಸಲು ರಾಜ್ಯ ಬಿಜೆಪಿಯ ಕೆಲವು ನಾಯಕರು ದೆಹಲಿಗೆ ತೆರಳಿದ್ದರು ಎಂಬ ಮಾತುಗಳು ಕೇಳಿ ಬಂದಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಆರಂಭವಾಗುತ್ತಿದ್ದಂರೆ ಯಡಿಯೂರಪ್ಪನವರ ಆಪ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕರೋನಾವನ್ನು ಎದುರಿಸುವಲ್ಲಿ ಯಡಿಯೂರಪ್ಪನವರ ಸರ್ಕಾರ ಉತ್ತಮವಾಗಿ ಕಾರ್ಯ ನಡೆಸುತ್ತಿದೆ ಈ ಸಂಧರ್ಭದಲ್ಲಿ ನಾಯಕತ್ವ ಬದಲಾವಾಣೆಯ ಮಾತುಗಳು ಬಂದರೆ ಅದು ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಆಗುವ ಮುಜುಗರ ಎಂದು ಹೇಳುತ್ತಿದ್ದಾರೆ.
ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ಯಡಿಯೂರಪ್ಪನವರ ಕಟ್ಟಾಳು ಎಂದು ಗುರುತಿಸಿಕೊಂಡಿರುವ ರೇಣುಕಾಚಾರ್ಯ ಅವರು ಬಿಜೆಪಿ ವಿರೋಧಿಗಳಿಗೆ ಖಡಕ್ ಟಾಂಗ್ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಎಂ.ಪಿ ರೇಣುಕಾಚಾರ್ಯ ನಾಯಕತ್ವ ಬದಲಾವಣೆಯ ಕಾರಣಕ್ಕೆ ದೆಹಲಿಗೆ ಹೋಗುವವರಿಗೆ ಖಡಕ್ ಟಾಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ತಮ್ಮ ಕ್ಷೇತ್ರದ ಕೆಲಸವನ್ನು ಮೊದಲು ಮಾಡಿ ಬಳಿಕ ನಾಯಕತ್ವ ಬದಲಾವಣೆಯ ಬಗ್ಗೆ ಮಾತಾಡಲು ದೆಹಲಿಗೆ ತೆರೆಳಿ ಎಂದು ಖಡಕ್ ಟಾಂಗ್ ಕೊಟ್ಟಿದ್ದಾರೆ.
Comments
Post a Comment