ಅರವಿಂದ್ ಬಳಿ ಇರುವ ಬೈಕ್ ಗಳ ಸಂಖ್ಯೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.?

ಅರವಿಂದ್ ಕೆ.ಪಿ ಕರ್ನಾಟಕದ ಮನೆ ಮನಗಳಲ್ಲಿ ಮಾತನಾಗಿರುವ ಭಾರತದ ಹೆಮ್ಮೆ. ಬಿಗ್ ಬಾಸ್ ಕನ್ನಡ 8ರಲ್ಲಿ ಭಾಗವಹಿಸಿದ ಬೈಕ್ ರೇಸ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಕರ್ನಾಟಕದ ಹಾಗೂ ಕರಾವಳಿಯ ರಿಯಲ್ ಹಿರೋ. ಬಿಗ್ ಬಾಸ್ ಗೆ ಪ್ರವೇಶಿಸಿದ ಬಳಿಕ ಇವರ ಸಾಧನೆ ಹಾಗೂ ವ್ಯಕ್ತಿತ್ವ ಕರ್ನಾಟಕದ ಪ್ರತಿಯೊಬ್ಬರಿಗೂ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಕೆ.ಪಿ ಅರವಿಂದ್ ಅವರು ವಿಶ್ವದ ಅತ್ಯಂತ ಕಠಿಣ ರೇಸ್ ಗಳಲ್ಲಿ ಒಂದಾದ ಢಾಕರ್ ರೇಸ್ ನ್ನು ಪ್ರತಿನಿಧಿಸಿ ಅದನ್ನು ಪೂರ್ಣಗೊಳಿಸಿದ ಎರಡನೇ ಭಾರತೀಯ.

ಟಿ.ವಿ.ಎಸ್ ಕಂಪೆನಿಯ ಅಧಿಕೃತ ರೇಸರ್ ಆಗಿ ಗುರುತಿಸಿಕೊಂಡಿರುವ ಅರವಿಂದ್ ಅವರು ಸದ್ಯ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ತಮ್ಮ ವ್ಯಕ್ತಿತ್ವ ಹಾಗೂ ಟಾಸ್ಕ್ ಮೂಲಕ ಬಹಳಷ್ಟು ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕನ್ನಡದ ಬಿಗ್ ಬಾಸ್ 8ನೇ ಸೀಸನ್ ಅರ್ಧಕ್ಕೆ ಮೊಟಕುಗೊಂಡಿದ್ದರು ಅರವಿಂದ್ ಅವರು ಜನರ ಪ್ರೀತಿ ಹಾಗೂ ವಿಶ್ವಾಸವನ್ನು ಗಳಿಸುವ ಮೂಲಕ ವಿಜೇತರಾಗಿದ್ದಾರೆ.

ಅರವಿಂದ್ ಅವರ ಜೊತೆ ಕೇಳಿ ಬರುವ ಮತ್ತೊಂದು ಹೆಸರು ದಿವ್ಯಾ ಉರುಡುಗ, ಕನ್ನಡ ಕೆಲ ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಬಿಗ್ ಬಾಸ್ ಮೂಲಕ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಬಹಳಷ್ಟು ಹೆಚ್ಚಿಸಿಕೊಂಡಿದ್ದಾರೆ. ಅರವಿಂದ್ ಹಾಗೂ ದಿವ್ಯಾ ಜೋಡಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಬಿಗ್ ಬಾಸ್ ಮುಗಿದ ಬಳಿಕ ಸರಣಿ ಸಂದರ್ಶನಗಳಲ್ಲಿ ಕಾಣಿಸಿಕೊಂಡಿರುವ ಅರವಿಂದ್ ಹಾಗೂ ದಿವ್ಯಾ ತಮ್ಮ ಸ್ನೇಹವನ್ನು ಕಾರ್ಯಕ್ರಮದಿಂದ ಹೊರಬಂದ ಬಳಿಕ ಅದೇ ರೀತಿ ಮುಂದುವರಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಬೈಕ್ ರೇಸರ್ ಆಗಿರುವ ಅರವಿಂದ ಬಳಿ ನಿಜವಾಗಿಯೂ ಎಷ್ಟು ಬೈಕ್ ಗಳಿವೆ ಎಂಬ ಕುತೂಹಲ ಆಭಿಮಾನಿಗಳಲ್ಲಿ ಇತ್ತು ಇದಕ್ಕೆ ಸದ್ಯ ಉತ್ತರ ದೊರಕಿದೆ. ಅಮೆರಿಕಾದ ಸ್ಯಾನ್ ಪ್ರಾನ್ಸಿಸ್ಕೊದಿಂದ ನಡೆದ ಸಂದರ್ಶನದಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ್ದು ಇದಕ್ಕೆ ಅರವಿಂದ್ ಅವರ ಜೋಡಿ ದಿವ್ಯಾ ಉತ್ತರಿಸಿದ್ದಾರೆ ಅರವಿಂದ್ ಬಳಿ ಒಟ್ಟು 14 ಬೈಕ್ ಗಳಿವೆ ಎಂದು ಹೇಳಿದ್ದಾರೆ ಇದಕ್ಕೆ ಅರವಿಂದ್ ಬಳಿ ಪ್ರಶ್ನಿಸಿದಾಗ ಹೌದ್ ಅರವಿಂದ್ ಹೇಳಿದ ಮಾತು ಸತ್ಯ ಎಂದು ಹೇಳಿದ್ದಾರೆ.

Comments