ಹುಬ್ಬಳಿಯಲ್ಲಿ ನಾಗರಹಾವನ್ನೇ ನುಂಗಿದ ಇನ್ನೊಂದು ನಾಗರಹಾವು: ಸ್ಥಳಕ್ಕೆ ಬಂದ ಸ್ನೇಕ್ ಮ್ಯಾನ್ ಮಾಡಿದ್ದೇನು

ಹಾವು ಎಂಬ ಶಬ್ದವನ್ನು ಒಂದು ಬಾರಿ ಕೇಳಿದರೆ ಎಲ್ಲಾರೂ ಹೌಹೌರುತ್ತಾರೆ. ಸದ್ಯ ಹುಬ್ಬಳಿಯಲ್ಲಿ ವಿಶೇಷ ಹಾಗೂ ರೋಚಕ ಘಟನೆಯೊಂದು ನಡೆದಿದೆ.  ಸಾಮಾನ್ಯವಾಗಿ ಒಂದು ಜಾತಿಯ ಹಾವು ಅದೇ ಜಾತಿಯ ಹಾವನ್ನು ನುಂಗುವುದಿಲ್ಲ ಎಂಬುದು ನಂಬಿಕೆ ಅದರೆ ಹುಬ್ಬಳಿಯಲ್ಲಿ ಇದಕ್ಕೆ ವಿರುದ್ದವಾದ ಘಟನೆಯೊಂದು ನಡೆದಿದೆ. ನಾಗರಹಾವು ತನ್ನದೇ ಜಾತಿಗೆ ಸೇರಿದ ನಾಗರಹಾವೊಂದನ್ನು ನುಂಗಿರುವ ಘಟನೆ ನಡೆದಿದೆ.

ಹುಬ್ಬಳಿಯ ಗಾಮನಕಟ್ಟೆ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ನಾಗರಹಾವು ತನ್ನದೇ ಜಾತಿಗೆ ಸೇರಿದ ಹಾವೊಂದನ್ನು ನುಂಗಿದ ಘಟನೆ ನಡೆದಿದೆ. ಈ ಸಂಧರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಂಗಮೇಶ್ ಅವರು ನಾಗರಹಾವಿನ ಬಾಯಿಯಿಂದ ಮತ್ತೊಂದು ನಾಗರಹಾವನ್ನು ಬಿಡಿಸಿ ಸಂಕಷ್ಟದಲ್ಲಿದ್ದ ಹಾವನ್ನು ರಕ್ಷಿಸಿ ಎರಡೂ ಹಾವುಗಳನ್ನು ಕಾಡಿಗೆ ಬಿಟ್ಟಿದ್ದಾರೆ. ಸಾಮಾನ್ಯವಾಗಿ ಜನವರಿಯಿಂದ ಜೂನ್ ತಿಂಗಳುವರೆಗೆ ಬೇಸಿಗೆ ಕಾಲವಾಗಿರುವುದರಿಂದ ಹಾವುಗಳು ಕಾಣಿಕೊಳ್ಳುವುದು ಸಾಮಾನ್ಯವಾಗಿದೆ.
\
ಹಾವುಗಳ ರಕ್ಷಣೆಯ ಬಗ್ಗೆ ಮಾತನಾಡಿರುವ ಸ್ನೇಕ್ ಸಂಗಮೇಶ್ ಅವರು ನಿಮ್ಮ ಮನೆಗೆ ಹಾವುಗಳು ಬಂದಾಗ ಅದಕ್ಕೆ ಯಾವುದೇ ರೀತಿಯಲ್ಲೂ ತೊಂದರೆ ಕೊಡಬೇಡಿ ಬದಲಾಗಿ ನಮ್ಮಂತಹ ಸ್ನೇಕ್ ತಜ್ಞರಿಗೆ ತಿಳಿಸಿ ಎಂದು ಕರೆ ನೀಡಿದ್ದಾರೆ. ಹುಬ್ಬಳಿಯ ಪರಿಸರದಲ್ಲಿ ಹಾವುಗಳು ಕಂಡರೆ ನಮ್ಮನ್ನು ಸಂಪರ್ಕಿಸಿ ಎಂದು ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿದ್ದಾರೆ 7259262295.

Comments