ಭಾರತದ ರಾಷ್ಟ್ರೀಯ ಪ್ರಾಣಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಹುಲಿಗಳ ಸಂತಾತಿ ವಿನಾಶದ ಅಂಚಿಗೆ ತಲುಪಿರುವ ವಿಷಾದನೀಯ ಸಂಗತಿ ನಿಮಗೆಲ್ಲರಿಗೂ ತಿಳಿದಿರುವ ಸತ್ಯ. ಹುಲಿಗಳು ಅತ್ಯಂತ ಕ್ರೂರ ಪ್ರಾಣಿಗಳಾದರು ಅನಗತ್ಯವಾಗಿ ಯಾರಿಗೂ ತೊಂದರೆ ಮಾಡುವಂತಹ ಪ್ರಾಣಿಗಳಲ್ಲ. ಮಾನವನ ದುರಾಸೆಗಾಗಿ ಇಂದು ಕಾಡುಗಳನ್ನು ನಾಶ ಮಾಡುತ್ತಿದ್ದಾನೆ ಇದರ ಫಲವಾಗಿ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತೀವೆ. ಮಾತ್ರವಲ್ಲದೆ ನಾಡಿಗೆ ಬಂದ ಪ್ರಾಣಿಗಳು ಮಾನವ ಕೊಂದು, ತನ್ನ ವಿ-ಕೃತಿಯನ್ನು ಮೆರೆಯುತ್ತಿದ್ದಾನೆ. ಇಂತಹ ಆನೇಕ ಸುದ್ದಿಗಳ ನಡುವೆ ಇಲ್ಲೊಂದು ಹುಲಿ ಸುಮಾರು 100 ಕಿ.ಮೀ ಪ್ರಯಾಣಿಸಿ ನಮ್ಮ ದೇಶವನ್ನು ತೊರೆದಿದೆ.
ಹೌದು, ಭಾರತದ ಕಾಡಿನಲ್ಲಿದ್ದ ಹುಲಿಯೊಮ್ದು ಸುಮಾರು ನಾಲ್ಕು ತಿಂಗಳುಗಳಲ್ಲಿ ನೂರು ಕಿಲೋ ಮೀಟರ್ ಕ್ರಮಿಸಿ ಪಕ್ಕಾದ ಬಾಂಗ್ಲಾದೇಶದ ಮ್ಯಾಂಗ್ರೋವ್ ಕಾಡಿಗೆ ಪ್ರಯಾಣ ಬೆಳೆಸಿದೆ. ಮಾತ್ರವಲ್ಲದೆ ಇದು ಸುಮಾರು ಒಂದು ಕಿಲೋ ಮೀಟರ್ ಉದ್ದದ ನದಿಯನ್ನು ಕೂಡ ದಾಟಿದೆ ಎಂಬುದು ತಿಳಿದು ಬಂದಿದೆ. ಅಷ್ಟಕ್ಕೂ ಈ ಎಲ್ಲಾ ಅಂಶಗಳು ಹೇಗೆ ತಿಳಿದಿದೆ ಎಂಬ ಬಗ್ಗೆ ಪ್ರಶ್ನೆಗಳು ನಿಮ್ಮಲ್ಲಿದ್ದಾರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಹುಲಿಗಳ ಚಲನವಲನಗಳನ್ನು ಗಮನಿಸಲು ರೇಡಿಯೋ ಕಾಲರ್ ಆಳವಡಿಸಿದ್ದು ಇದರಿಂದ ಹುಲಿಗಳ ಚಲನವಲನಗಳನ್ನು ಗಮನಿಸಲು ಸಹಕಾರಿಯಾಗುತ್ತದೆ. ಈ ಕಾರಣಕ್ಕಾಗಿ ಹುಲಿಗಳ ಮೇಲೆ ರೇಡಿಯೋ ಕಾಲರ್ ಆಳವಡಿಸಿದ್ದು ಇದರಿಂದಾಗಿ ಈ ಹುಲಿಯ ಚಲನೆಯನ್ನು ಗಮನಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Comments
Post a Comment