ಪಕ್ಕಾ ಆಯ್ತಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆ ಸುದ್ದಿ.? ಸುಳಿವು ನೀಡಿದ್ದು ಯಾರು

ರಾಜಕೀಯ ಎಂಬುದು ನಿಂತ ನೀರಲ್ಲ ಎಂದು ಪಂದಿತರು ಹೇಳುವ ಮಾತು. ಮಾತ್ರವಲ್ಲದೆ ರಾಜಕೀಯದಲ್ಲಿ ಯಾವುದೇ ಸಂಧರ್ಭದಲ್ಲಿಯೂ ಅಧಿಕಾರದ ಗದ್ದುಗೆ ಏರಬಹುದು ಅಥವಾ ಯಾವ ಸಂಧರ್ಭದಲ್ಲಿ ಬೇಕಾದರೂ ಅಧಿಕಾರದಿಂದ ಕೆಳಗಿಳಿಯಬುದು ಎಂಬ ಮಾತಿಗೆ ಬಸವರಾಜ್ ಬೊಮ್ಮಾಯಿ ಅವರು ಸೂಕ್ತ ಉದಾಹರಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಬಸವರಾಜ್ ಬೊಮ್ಮಾಯಿ ಕರ್ನಾಟಕ ರಾಜ್ಯದ ಹಾಲಿ ಮುಖ್ಯಮಂತ್ರಿ. ಒಂದು ಮಾತಿನಲ್ಲಿ ಹೇಳುವುದಾದರೆ ಕರ್ನಾಟಕದ ರಾಜಕೀಯದಲ್ಲಿ ಯಾರು ಊಹಿಸದ ಸಂಧರ್ಭದಲ್ಲಿ ಮುಖ್ಯಮಂತ್ರಿಯಾದ ಇವರು ಭವಿಷ್ಯದ ಬಿಜೆಪಿ ಲೀಡರ್ ಎಂದು ಬಿಂಬಿಸಲಾಗಿತ್ತು. ಕರ್ನಾಟಕದ ರಾಜಕೀಯದ ಮಾಸ್ ಲೀಡರ್ ಯಡಿಯೂರಪ್ಪ ಅವರನ್ನು ಮುಟ್ಟುವ ತಾಕತ್ತು ಯಾರಿಗೂ ಇರಲಿಲ್ಲ ಅದರೂ ಒತ್ತಡಗಳಿಗೆ ಮನಿದು ಹಾಗೂ ಮುಂದಿನ ಚುನಾವಣೆಯ ದೃಷ್ಟಿಯಿಂದ ಬಿ.ಎಸ್.ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರೇ ಸೂಚಿಸಿದ ಬೊಮ್ಮಾಯಿ ಅವರನ್ನು ಅಧಿಕಾರದ ಗುದ್ದುಗೆಯಲ್ಲಿ ಕೂರಿಸಲಾಯಿತು ಅದರೆ ಸದ್ಯ ಬೊಮ್ಮಾಯಿ ಅವರ ಸ್ಥಾನಕ್ಕೆ ಕುತ್ತು ಬಂತಾ ಎನ್ನುವ ಪ್ರಶ್ನೆಗಳು ಸಹಜವಾಗಿ ಕೇಳಿ ಬರುತ್ತಿದೆ.

ಬಿಜೆಪಿಯ ಕೇಂದ್ರ ಹೈಕಮಾಂಡ್ ನೀರಿಕ್ಷಿಸಿದ ಮಟ್ಟದಲ್ಲಿ ಅಧಿಕಾರವನ್ನು ಬೊಮ್ಮಾಯಿ ಅವರು ನಡೆಸಿಲ್ಲ ಎಂಬ ಬೇಸರ ಕೂಡ ಇದೇ ಎನ್ನಲಾಗುತ್ತಿದೆ. ಅದರೂ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬೊಮ್ಮಾಯಿ ಅವರನ್ನು ಇದೇ ಕಾರಣದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಕರ್ನಾಟಕದ ಮತ್ತೋರ್ವ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ತೆರೆ ಮರೆಯಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ ಅದರೂ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬಂಶ ಇನ್ನೂ ಕೂಡ ಬಯಲಾಗಿಲ್ಲ ಅದರೂ ಒಂದು ಮಾತಿನ ಪ್ರಕಾರ ಬೊಮ್ಮಾಯಿ ಅವರು ಈ ಬಗ್ಗೆ ಮೂನ್ಸೂಚನೆ ನೀಡಿದರೆ ಎಂಬ ಮಾತುಗಳು ಕೇಳಿ ಬರುತ್ತೀವೆ.

ಬಸರಾಜ್ ಬೊಮ್ಮಾಯಿ ರಾಜೀನಾಮೆ ಕುರಿತಾದ ರಾಜೀನಾಮೆ ಸುದ್ದಿ ಕೇಳಿ ಬರಲು ಪ್ರಮುಖ ಕಾರಣ ಅವರೇ ಮಾಡಿದ ಭಾಷಣ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂಬ ಮಾತಿನ ಮೂಲಕ ಮಾತು ಆರಂಭಿಸಿದ ಅವರು ತಾವೂ ರಾಜೀನಾಮೆಗೆ ಸಿದ್ದ ಎಂದು ಪರೋಕ್ಷವಾಗಿ ಹೇಳಿದರೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಯಿತು. ಒಟ್ಟಾರೆಯಾಗಿ ಈ ಬಗ್ಗೆ ಅದಿಕೃತ ಮಾಹಿತಿ ಇಲ್ಲದಿದ್ದಾರೂ ಈ ರೀತಿಯ ಸುದ್ದಿಗಳು ಕೇಳಿ ಬರುತ್ತಿರುವುದು ಮಾತ್ರ ಸುಳ್ಳಲ್ಲ. ಇದೇ ರೀತಿಯ ಸುದ್ದಿಗಳು ಯಡಿಯೂರಪ್ಪ ರಾಜೀನಾಮೆಯ ಸಂಧರ್ಭದಲ್ಲಿ ಕೇಳಿ ಬಂದಿತ್ತು ಬಳಿಕ ಅದು ನಿಜವಾಯಿತು.

Comments