ತೇಜಸ್ವಿ ಸೂರ್ಯಗೆ ಒಲಿದ ಮಹತ್ವದ ಪ್ರಶಸ್ತಿ.! ಶಹಬ್ಬಾಸ್ ಎಂದ ಪ್ರಧಾನಿ ಮೋದಿ

 

ಚೊಚ್ಚಲ ಬಾರಿಗೆ ಆಯ್ಕೆಯಾಗಿ ಉತ್ತಮ ಸೇವೆ ಸಲ್ಲಿಸಿರುವ ಸಂಸದರಿಗೆ 'ಲೋಕಮತ್ ಸಂಸದೀಯ ಪ್ರಶಸ್ತಿ- 2022, (4ನೆ ಆವೃತ್ತಿ)ಯಲ್ಲಿ ಅತ್ಯುತ್ತಮ ಸಂಸದ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಈ ಪ್ರಶಸ್ತಿ ಕರ್ನಾಟಕಕ್ಕೆ ಒಲಿದಿದ್ದು, ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಘಟಕದ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ ಕಳೆದ ಬಾರಿ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರು ಮೃತಪಟ್ಟ ನಂತರ ಅವರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.

28ರ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ, ಮಾಹಿತಿ ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರೂ ಆಗಿದ್ದು, ಅನೇಕ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. 17ನೇ ಲೋಕಸಭೆಯಲ್ಲಿ ಎಲ್ಲ ವಲಯಗಳ ಮೇಲಿನ, ರಾಷ್ಟ್ರೀಯ & ಅಂತಾರಾಷ್ಟ್ರೀಯ ಹಿತಾಸಕ್ತಿಯ 308 ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳಿರುವ ತೇಜಸ್ವಿ ಸೂರ್ಯ ಈ ಕುರಿತು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದಿನ ಆವೃತ್ತಿಗಳಲ್ಲಿ ಪ್ರಶಸ್ತಿ ಸ್ವೀಕರಿಸಿದವರಲ್ಲಿ ಡಾ. ಭಾರತಿ ಪ್ರವೀಣ್ ಪವಾರ್, ಮೀನಾಕ್ಷಿ ಲೇಖಿ, ಹಾಗೂ ನಿಶಿಕಾಂತ್ ದುಬೇ ಪ್ರಮುಖರಾಗಿದ್ದಾರೆ. ಡೆರೆಕ್ ಓ ಬ್ರಿಯಾನ್ ಉತ್ತಮ ಸಂಸದ, ಭರ್ತ್ರುಹರಿ ಮಹ್ತಾಬ್ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿರೋದು ವಿಶೇಷ. ಸದ್ಯ ತಾನು ಸಂಸದನಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಅತ್ಯುತ್ತಮ ಸಂಸದನೆಂಬ ಹೆಗ್ಗಳಿಕೆಗೆ ಪಾತ್ರನಾಗಿ ಖುಷಿಯಲ್ಲಿ ಇರುವ ಸಂಸದ ತೇಜಸ್ವಿ ಸೂರ್ಯ, ಖುಷಿಯಿಂದಲೇ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.

Comments