ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೂಹುರ್ತ ಫಿಕ್ಸ್.! ಎಷ್ಟು ಹಂತಗಳಲ್ಲಿ ನಡೆಯಲಿದೆ ಚುನಾವಣೆ.?

 

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಒಂದು ಕಡೆ ಪಕ್ಷಾಂತರಿಗಳು ಪಕ್ಷ ಬದಲಿಸುತ್ತಿದ್ದರೆ ಮತ್ತೊಂದು ಕಡೆ ರಾಜಕೀಯ ನಾಯಕರು ತಮ್ಮ ಆರೋಪ-ಪ್ರತ್ಯಾರೋಪಗಳ ಮೂಲಕ ನಾವು ಮಾಡಿದ್ದು ಸರಿ ನಮ್ಮದು ಸರಿ ಎಂದು ಜನಗಳ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವನ್ನು ಮತ್ತಷ್ಟು ಹೆಚ್ಚಿಸಲು ಚುನಾವಣಾ ಆಯೋಗ ವಿಧಾನ ಸಭಾ ಚುನಾವಣೆಯ ದಿನಾಂಕವನ್ನೂ ಪ್ರಕಟಿಸಿದೆ.

೨೦೨೩ರ ಸಾಲಿನ ವಿಧಾನಸಭಾ ಚುನಾವಣೆ ಬಾರಿ ಜಿದ್ದಾ ಜಿದ್ದಿನ ಚುನಾವಣೆಯಾಗಿದ್ದು, ಅಂತಿಮವಾಗಿ ಯಾರು ಅಧಿಕಾರದ ಗದ್ದುಗೆಯನ್ನು ಏರಲಿದ್ದಾರೆ ಎಂಬುದು ಇನ್ನೂ ಕೆಲವೇ ದಿನಗಳಲ್ಲಿ ತಿಳಿಯಲಿದೆ. ಈ ಸಂಬಂಧ ಚುನಾವಣಾ ಆಯೋಗವೂ ಸಿದ್ದವಾಗಿದ್ದು,ಸಕಲ ರೀತಿಯ ಸಿದ್ದತೆಯನ್ನು ಮಾಡಿಕಂಡಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ನಡೆಸಿದ ಸುದ್ದಿಗೋಷ್ಟಿಯಲ್ಲಿ ಹಲವಾರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ೫.೨೧ ಕೋಟಿ ಮತದಾರರನ್ನು ಕರ್ನಾಟಕ ಒಳಗೊಂಡಿದೆ. ಕರ್ನಾಟಕದ ವಿಧಾನಸಭಾ ಚುನಾವಣೆ ಕೇವಲ ಒಂದು ಹಂತದಲ್ಲಿ ನಡೆಯಲಿದ್ದು ಏಪ್ರಿಲ್ ೧೩ಕ್ಕೆ ಗೆಜೆಟ್ ಪ್ರಕ್ರಿಯೆ ಆರಂಭವಾಗಿ ಮೇ ೧೦ಕ್ಕೆ ಚುನಾವಣೆ ನಡೆಯಲಿದ್ದುಮೇ ೧೩ಕ್ಕೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

ಮಾರ್ಚ್ ೨೯ ನೀತಿ ಸಂಹಿತೆ ಜಾರಿ

ಏಪ್ರಿಲ್ ೧೩ ನಾಮ ಪತ್ರಿಕೆ ಆರಂಭ

ಏಪ್ರಿಲ್ ೨೦ ನಾಮ ಪತ್ರಿಕೆ ಸಲ್ಲಿಕೆಗೆ ಕೊನೆ ದಿನ

ಏಪ್ರಿಲ್ ೨೧ ನಾಮಪತ್ರ ಪರಿಶೀಲನೆ

ಏಪ್ರಿಲ್ ೨೪ ನಾಮಪತ್ರ ಹಿಂಪಡೆಯಲು ಕೊನೆಯ ದಿನ

ಮೇ ೧೦ ಮತದಾನ ನಡೆಯುವ ದಿನ

ಮೇ ೧೩ ಚುನಾವಣೆಯ ಫಲಿತಾಂಶ

ಕೆಲವು ರಾಜಕೀಯ ಪಕ್ಷಗಳು ತಮ್ಮ ಆಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಚುನಾವಣಾ ಕಣ ಮತ್ತಷ್ಟು ರಂಗೇರುವಂತೆ ಮಾಡಿರುವುದು ಸುಳ್ಳಲ್ಲ. ಒಟ್ಟಾರೆಯಾಗಿ ಈ ಬಾರಿ ಯಾವ ಪಕ್ಷ ಆಧಿಕಾರಕ್ಕೆ ಬರಲಿದೆ ಎಂಬುದು ಇನ್ನೂ ಮೇ ೧೩ ತಿಳಿಯಲಿದೆ.

Comments