ನವದೆಹಲಿ: ಬೆಲೆ ಏರಿಕೆ, ನಿರಿದ್ಯೋಗ ಹಾಗೂ ಇನ್ನಿತರ ತೊಂದರೆಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಮೋದಿ ಸರ್ಕಾರದ ಈ ನಿರ್ಧಾರ ಬಡ ಹಾಗೂ ಮಧ್ಯಮ ವರ್ಗದ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ ಮಾತ್ರವಲ್ಲದೆ ಇದು ಜನರಿಗೆ ಬಹಳಷ್ಟೂ ಸಹಾಯವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಂದಹಾಗೆ ನರೇಂದ್ರ ಮೋದಿಯವರು ನೀಡಿದ ಆ ಗುಡ್ ನ್ಯೂಸ್ ಯಾವುದು ಗೊತ್ತಾ.? ಇಲ್ಲಿದೆ ನೋಡಿ ಕಂಪ್ಲಿಟ್ ಚಿತ್ರಣ.
ದಿನ ಬಳಕೆಯ ವಸ್ತುಗಳಲ್ಲಿ ಒಂದಾದ ಎಲ್.ಪಿ.ಜಿ ಗ್ಯಾಸ್ ಬೆಲೆ ಹೆಚ್ಚಾಗಿರುವುದು ಕೆಲ ಹಾಗೂ ಮಧ್ಯಮ ವರ್ಗದ ಜನರಿಗೆ ಭಾರೀ ತೊಂದರೆಯಾಗಿದೆ ಎಂದು ಪ್ರತಿಪಕ್ಷಗಳು ಹೋರಾಟ ನಡೆಸುತ್ತಿದ್ದವು ಅದರೆ ಸದ್ಯ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವ ಕೆಲಸ ನರೇಂದ್ರ ಮೋದಿ ಮಾಡಿದ್ದಾರೆ. ಗೃಹ ಬಳಕೆಯ ಎಲ್.ಪಿ.ಜಿ ಸಿಲಿಂಡರ್ ಗೆ ಸುಮಾರು ೨೦೦ ರೂಪಾಯಿಗಳಷ್ಟು ಸಬ್ಸಿಡಿ ನೀಡುವ ಮೂಲಕ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಬಗೆ ಅಧಿಕೃತ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ನಾಳೆಯಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್.ಪಿ.ಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಪಡೆಯಲು ನಿಮ್ಮ ಎಲ್.ಪಿ.ಪಿ ಐಡಿ ಹಾಗೂ ಅಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಮಾತ್ರವಲ್ಲದೆ ಸುಮಾರು ೧೨ ಸಿಲಿಂಡರ್ ವರೆಗೆ ಈ ಸಬ್ಸಿಡಿ ಲಭ್ಯವಾಗಲಿದೆ. ೧೧೦೦ರೂಪಾಯಿಗೆ ಸಿಗುತ್ತಿದ್ದ ಗ್ಯಾಸ್ ಇನ್ನು ಮುಂದೆ ೯೦೦ ರೂಪಾಯಿ ಸಿಗಲಿದೆ.
Comments
Post a Comment