ನವೆಂಬರ್ ಡಿಸೆಂಬರ್ ವರದಿಯ ಪ್ರಕಾರ 128 ವರ್ಷಗಳ ಗಂಗೆಯ ಕಳಂಕಕ್ಕೆ ಮುಕ್ತಿ ಸಿಕ್ಕಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಎಲ್ಲಾ ಕ್ಷೇತ್ರಗಳ ಮೇಲೂ ಅಭಿವೃದ್ಧಿಯ ಛಾಯೆ ಬಿದ್ದಿದೆ. ಗಂಗಾ ನದಿ ಅನೇಕ ಕಾರಣಗಳಿಂದ ಮಲೀನವಾದ ಪರಿಣಾಮ ಹಿಂದೂಗಳಿಗೆ ದೊಡ್ಡ ಅಸಮಾಧಾನ ಉಂಟಾಗಿತ್ತು. ಇದನ್ನು ತೊಡೆದು ಹಾಕಲು ಪ್ರಧಾನಿ ಮೋದಿಯವರು ತಯಾರಾಗಿ ನಿಂತ ಪರಿಣಾಮ ಇದೀಗ ಗಂಗೆಗೆ ಮುಕ್ತಿ ದೊರೆಯುತ್ತಿದೆ. ಹೌದು ಏಷ್ಯಾದ ಅತೀದೊಡ್ಡ ಸಿಸಾಮು ಚರಂಡಿಯಿಂದ ನಿತ್ಯ ಗಂಗಾ ನದಿಗೆ ಹರಿದು ಬರುತ್ತಿದ್ದ ಕೊಳಚೆ ಈಗ ಸಂಪೂಣ೯ ಸ್ಥಗಿತಗೊಂಡಿದೆ. ಈ ಮೂಲಕ ಗಂಗೆಗೆ ಅಂಟಿದ್ದ 128 ವರ್ಷಗಳ ಶಾಪ ವಿಮೋಚನೆಗೊಂಡಿದೆ.
ಸಿಸಾಮು ಚರಂಡಿಯಿಂದ ಕಳೆದ 128 ವರ್ಷಗಳಿಂದ ದಿನ ನಿತ್ಯ 14 ಕೋಟಿ ಲೀಟರ್ ಕೊಳಚೆ ಗಂಗಾ ನದಿಗೆ ಹರಿದು ಬರುತ್ತಿತ್ತು. ಕಳೆದ ನವೆಂಬರ್ ಡಿಸೆಂಬರ್ ವರದಿಯ ಪ್ರಕಾರ ಆ ಕೊಳಚೆಯನ್ನು ಜಜ್ಮಾವ್ ಟ್ರೀಟ್ ಮೆಂಟ್ ಪ್ಲಾಂಟ್ಗೆ ತಿರುಗಿಸಲಾಗಿದೆ. ಈ ಹಿಂದೆಯೇ 8 ಕೋಟಿ ಲೀಟರ್ ಕೊಳಚೆಯನ್ನು ಯಶಸ್ವಿಯಾಗಿ ಗಂಗೆಗೆ ಹರಿಯದಂತೆ ತಿರುಗಿಸಲಾಗಿತ್ತು. ಆದರೆ ಉಳಿದ 6 ಕೋಟಿ ಲೀಟರ್ನ್ನು ತಿರುಗಿಸುವುದು ಕಷ್ಟದಾಯಕವಾಗಿತ್ತು. ಆದರೀಗ ಉತ್ತರಪ್ರದೇಶದ ಜಲ್ ನಿಗಮ್ ಮತ್ತು ನಮಾಮಿ ಗಂಗೆ ಎಂಜಿನಿಯರ್ಗಳು ಇದನ್ನು ಸಾಧಿಸಿ ತೋರಿಸಿದ್ದಾರೆ.
ಎಂಜಿನಿಯರಿಂಗ್ ತಂತ್ರಜ್ಞಾನ ಮತ್ತು ಪಂಪಿಂಗ್ ಮೆಶಿನ್ಗಳ ಸಹಾಯದಿಂದ ಕೊಳಚೆಯನ್ನು ಪ್ಲಾಂಟ್ಗೆ ತಿರುಗಿಸಲಾಗಿದೆ. ಈ ಮೂಲಕ ಗಂಗೆ 128 ವರ್ಷಗಳ ಶಾಪದಿಂದ ವಿಮೋಚನೆಗೊಂಡಿದ್ದಾಳೆ. ಈ ಮೂಲಕ ಪ್ರಧಾನಿ ಮೋದಿಯವರು ಹಿಂದುಗಳಿಗೆ ಭರ್ಜರಿ ಗಿಫ್ಟ್ ಕೊಟ್ಟಂತಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಇದೇ ಗಂಗಾ ನದಿಯ ಶುದ್ಧೀಕರಣಕ್ಕಾಗಿ ದೊಡ್ಡ ಪ್ರಯತ್ನಕ್ಕೆ ಕೈಹಾಕಿದ್ದರು. ಗಂಗಾ ನದಿಯನ್ನು ಮಾಲಿನ್ಯಗೊಳಿಸುವ ವ್ಯಕ್ತಿಗಳನ್ನು ಪತ್ತೆ ಮಾಡಿ, ಶಿಕ್ಷಿಸುವ ಸಲುವಾಗಿ ಶಸ್ತ್ರಸಜ್ಜಿತ ’ಗಂಗಾ ಪ್ರೊಟೆಕ್ಷನ್ ಕಾರ್ಪ್ಸ್’ನ್ನು ಸ್ಥಾಪನೆ ಮಾಡಲು ‘ರಾಷ್ಟ್ರೀಯ ಗಂಗಾ ನದಿ ಕಾಯ್ದೆ 2018’ನ ಕರಡಿನಲ್ಲಿ ಶಿಫಾರಸ್ಸು ಮಾಡಲಾಗಿದೆ. ಗಂಗಾನದಿಯನ್ನು ಶುದ್ಧವಾಗಿ ಇಟ್ಟುಕೊಳ್ಳಲು, ಅದರ ಪುನರುಜ್ಜೀವನಕ್ಕೆ ಸಹಾಯ ಮಾಡಲು ‘ಗಂಗಾ ಪ್ರೊಟೆಕ್ಷನ್ ಕಾರ್ಪ್ಸ್’ ಸ್ಥಾಪನೆಯ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ರಾಷ್ಟ್ರೀಯ ಗಂಗಾ ಮಂಡಳಿಯ ಬೇಡಿಕೆಯಂತೆ ಕಾರ್ಪ್ಸ್‌ನ್ನು ಗೃಹಸಚಿವಾಲಯ ರಚನೆ ಮಾಡಲಿದೆ. ಗಂಗಾ ಮಂಡಳಿ ಐದು ತಜ್ಞರ ಸಮಿತಿಯಗಿದ್ದು, ಗಂಗೆಗೆ ಹಾನಿಯುಂಟು ಮಾಡುವ ಮಾಲಿನ್ಯಕಾರಕ ಕೈಗಾರಿಕೆಗಳ ಸ್ಥಗಿತ, ಅಕ್ರಮ ಕಟ್ಟಡ, ಬ್ರಿಡ್ಜ್‌ಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ಇದಕ್ಕಿದೆ. ‘ರಾಷ್ಟ್ರೀಯ ಗಂಗಾ ನದಿ ಕಾಯ್ದೆ 2018’ ಕರಡು ಕೇಂದ್ರ ಗೃಹಸಚಿವಾಲಯದ ಮುಂದೆ ಇದ್ದು, ಪರಿಶೀಲನೆ ನಡೆಸಿದ ಬಳಿಕವಷ್ಟೇ ಕಾರ್ಪ್ಸ್ ಸ್ಥಾಪನೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.
ಭಾರತೀಯರು ಭಾವ ಜೀವಿಗಳು. ಹೀಗಾಗಿ ತಮ್ಮ ಸಂಸ್ಕೃತಿಯ, ಪರಂಪರೆಯ ಬಗ್ಗೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಹಿಂದುಗಳ ಪ್ರತಿಯೊಂದು ಆಚರಣೆಯೂ ವೈಜ್ಞಾನಿಕವೇ ಎಂಬುದು ಜಗಜ್ಜಾಹಿರಾಗಿದೆ. ಹಿಂದುಗಳು ಪಾವನವೆಂದು ನಂಬುವ ಗಂಗಾ ನದಿಯನ್ನು ಪ್ರಧಾನಿ ಮೋದಿ ಶುಚಿಗೊಳಿಸಲು ಪಣ ತೊಟ್ಟು ನಿಂತಿದ್ದಾರೆ. ಹಿಂದೂ ಧರ್ಮ ಆಚಾರದ ಪ್ರಕಾರ ಗಂಗಾನದಿ ಅತ್ಯಂತ ಪವಿತ್ರವಾದುದು. ಗಂಗಾ ನದಿಯಲ್ಲಿ ಸ್ನಾನವನ್ನು ಮಾಡಿದರೆ ಜನ್ಮ ಜನ್ಮಗಳ ಪಾಪ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. ಸಾಯುವ ಮುಂಚೆ ಗಂಗಾ ಜಲವನ್ನು ಕುಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಹಿಂದೂಗಳ ಗಾಢವಾದ ನಂಬಿಕೆಯಾಗಿದೆ. ಈ ನಂಬಿಕೆಗೆ ಪ್ರಧಾನಿ ಮೋದಿಯವರು ಕಟಿಬದ್ಧರಾಗಿದ್ದಾರೆ.
Comments
Post a Comment