ಬಿಜೆಪಿ ಪಕ್ಷಕ್ಕೆ ಬರುವಂತೆ ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ನಟಿ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ' ಮಂಡ್ಯ ಪ್ರವಾಸದಲ್ಲಿ ಜನರಿಂದ ನನಗೆ ಒಳ್ಳೆಯ ರೀತಿಯಲ್ಲಿ ಸ್ಪಂದನೆ ಸಿಗುತ್ತಿದೆ ಎಂದರು. ಇವತ್ತಿನವರೆಗೂ ನನಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಮಾಹಿತಿ ಬಂದಿಲ್ಲ. ಆದರೆ ಮಂಡ್ಯದ ಕಾಂಗ್ರೆಸ್ ಪಕ್ಷದ ಜನರು ನನಗೆ ಸಪೋರ್ಟ್ ಮಾಡುತ್ತಿದ್ದಾರೆ. ಅವರಿಗೂ ಕೂಡ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದರು.
ನಾನು ಮಂಡ್ಯ ಬಿಟ್ಟು ಬೇರೆ ಕಡೆ ನಿಲ್ಲುವುದಿಲ್ಲ, ನನಗೆ ಒಂದು ವೇಳೆ ಬಿಜೆಪಿಯಿಂದ ಆಫರ್ ಬಂದರೆ ಮೊದಲು ಅವರು ಯಾವ ರೀತಿ ಸಪೋರ್ಟ್ ಮಾಡುತ್ತಾರೆ ಎಂದು ಎನ್ನುವುದನ್ನು ನೋಡಿಕೊಂಡು ನನ್ನ ನಿರ್ಧಾರ ತಿಳಿಸುತ್ತೇನೆ ಎಂದರು. ಈ ಮೂಲಕ ಬಿಜೆಪಿಯಿಂದ ಆಫರ್ ಬಂದರೆ ಪಕ್ಷ ಸೇರುವ ಇಂತಿತವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
Comments
Post a Comment