ಬಿಗ್ ಬ್ರೇಕಿಂಗ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ದಿಟ್ಟ ಮಹಿಳೆ.?

ತೆಲಂಗಾಣ ಕಾಂಗ್ರೆಸ್ಸಿನ ಮಾಜಿ ನಾಯಕಿ, ಮಾಜಿ ಸಚಿವೆ ಡಿಕೆ ಅರುಣಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಕೇಂದ್ರ ಸಚಿವ ಜೆಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹಾಗೂ ಇನ್ನಿತರ ನಾಯಕರ ಸಮ್ಮುಖದಲ್ಲಿ ಡಿಕೆ ಅರುಣಾ ಅವರು ಕೇಸರಿ ಪಡೆ ಸೇರಿಕೊಂಡರು.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಯಾವುದೇ ಸಾಧ್ಯತೆಗಳಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಹೀಗಾಗಿ,ನಾನು ಬಿಜೆಪಿ ಸೇರಿದ್ದೇನೆ ಎಂದು ಡಿಕೆ ಅರುಣಾ ಹೇಳಿದರು. ತೆಲಂಗಾಣದ ಗದ್ವಾಲ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿರುವ ಅರುಣಾ ಅವರು ಮಾಹಿತಿ ಮತ್ತು ಸಾರ್ವಜನಿಕ ಸೇವೆ ಇಲಾಖೆಯ ಸಚಿವೆಯಾಗಿದ್ದರು.

ಮುಂಬರುವ ಚುನಾವಣೆಯಲ್ಲಿ ಅರುಣಾ ಅವರಿಗೆ ಮೆಹ್ಬೂಬ್ ನಗರ ಲೋಕಸಭಾ ಸ್ಥಾನಕ್ಕಾಗಿ ಸ್ಪರ್ಧಿಸಲು ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲ್ಪಟ್ಟಿದ್ದ ಅರುಣಾ ಲೋಕಸಭಾ ಚುನಾವಣೆಗೆ ಮೊದಲು ಈ ಬೆಳವಣಿಗೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ತೆಲಂಗಾಣ ಕಾಂಗ್ರೆಸ್ಸಿನಿಂದ ಡಿಕೆ ಅರುಣಾ ಸೇರಿದಂತೆ 8 ಮಂದಿ ಶಾಸಕರು ಪಕ್ಷ ತೊರೆದಿದ್ದಾರೆ. ಬಹುತೇಕರು ತೆಲಂಗಾಣ ರಾಷ್ಟ್ರ ಸಮಿತಿ ಸೇರಿದ್ದಾರೆ. 17 ಲೋಕಸಭಾ ಸ್ಥಾನಗಳಿಗಾಗಿ ತೆಲಂಗಾಣ ರಾಜ್ಯದಲ್ಲಿ ಚುನಾವಣೆ ಏಪ್ರಿಲ್ 18ರಂದು ಚುನಾವಣೆ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬರಲಿದೆ. ಮುಂದೆ ಓದಿ

Comments