ಪುಲ್ವಾಮ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು ಸುಮಾರು ನಾಲವತ್ತಕ್ಕೂ ಅಧಿಕ ಸೈನಿಕರನ್ನು ಪಾಪಿ ಉಗ್ರರು ಬಲಿ ತೆಗೆದುಕೊಂಡರು. ಪುಲ್ವಾಮ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಬೇಕೆಂಬ ಕೂಗು ದೇಶವ್ಯಾಪಿ ಹೆಚ್ಚಾಯಿತು. ಈ ನಡುವೆ ಪ್ರಧಾನಿ ನರೇಂದ್ರ ಮೊದಿ ಸೇನೆಗೆ ಸ್ವಾತಂತ್ರ್ಯವನ್ನು ನೀಡುವ ಮೂಲಕ ಸೈನಿಕರಿಗೆ ಸಂಪೂರ್ಣ ಅಧಿಕಾರವನ್ನು ನೀಡಿದರು.
ನರೇಂದ್ರ ಮೋದಿಯವರು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರಿಂದ ವಾಯುಸೇನೆಯ ಮೂಲಕ ಏರ್ ಸ್ಟ್ರೈಕ್ ದಾಳಿ ನಡೆಸಲಾಯಿತು. ದಾಳಿಯಲ್ಲಿ ಸುಮಾರು 250ಕ್ಕೂ ಅಧಿಕ ಉಗ್ರರು ಹತ್ಯೆಯಾಗಿರಬಹುದು ಎಂದು ಹಲವಾರು ಸಂಸ್ಥೆಗಳು ವರದಿ ಮಾಡಿವೆ. ಈ ಮಧ್ಯೆ ನರೇಂದ್ರ ಮೋದಿ ಸರ್ಕಾರ ಪುಲ್ವಾಮ ದಾಳಿಯಿಂದ ಎಚ್ಚೆತ್ತು ಐತಿಹಾಸಿಕ ನಿರ್ಧಾರವೊಂದನ್ನು ಪ್ರಕಟಿಸಿದೆ. ಹೌದು, ಭಾರತೀಯ ಸೇನೆಯ ಕಾನೂನುಗಳ ಪ್ರಕಾರ ಕೆಲವು ತಿಂಗಳುಗಳ ಬಳಿಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸೇನಾ ವ್ಯಾಪ್ತಿಗೆ ನಿಯೋಜನೆಗೊಳ್ಳುತ್ತಾರೆ. ಪುಲ್ವಾಮದಲ್ಲಿಯೂ ಸೈನಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವ ಸಂಧರ್ಭದಲ್ಲಿ ದಾಳಿ ನಡೆಸಿದ್ದರು. ಇದನ್ನು ತಪ್ಪಿಸಲು ಮೋದಿ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೊಳಿಸಿದೆ.
ಹೌದು, ಇನ್ನು ಮುಂದೆ ಸೈನಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುವ ಸಂಧರ್ಭದಲ್ಲಿ ಸೇನಾ ವಾಹನವನ್ನು ಬಳಸುವ ಬದಲು ವಿಮಾನವನ್ನು ಬಳಸಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಯೋಧರು ಕೂಡ ಈ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಮೂಲಕ ಭಾರತೀಯ ಸೇನೆಯನ್ನು ಇನ್ನೂ ಯಾವ ಪಾಪಿ ಉಗ್ರನು ಕೂಡ ಮುಟ್ಟಲು ಸಾಧ್ಯವಿಲ್ಲ.
Comments
Post a Comment