ಸ್ಮೃತಿ ವಿರುದ್ಧ ರಾಹುಲ್ ಸೋಲುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನತೆ ಮತ್ತೊಮ್ಮೆ ಅವರ ಕೈ ಹಿಡಿಯಲಿದ್ದಾರೆ. ಒಂದೊಮ್ಮೆ ಸೋತರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸಿಧು ಹೇಳಿದ್ದಾರೆ.
ಉತ್ತರ ಪ್ರದೇಶದ ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಲು ಅನುಭವಿಸಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಸವಾಲು ಹಾಕಿದ್ದಾರೆ.
”ಅಮೇಠಿಯಲ್ಲಿ ಸ್ಮೃತಿ ತೀವ್ರ ಪೈಪೋಟಿ ನೀಡುತ್ತಿದ್ದು, ಸೋಲಿನ ಭೀತಿಯಿಂದಲೇ ರಾಹುಲ್ ಕೇರಳದ ವಯನಾಡ್‌ನಿಂದಲೂ ಕಣಕ್ಕೆ ಇಳಿದಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡುತ್ತಿದೆ. ಸ್ಮೃತಿ ವಿರುದ್ಧ ರಾಹುಲ್ ಸೋಲುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನತೆ ಮತ್ತೊಮ್ಮೆ ಅವರ ಕೈ ಹಿಡಿಯಲಿದ್ದಾರೆ. ಒಂದೊಮ್ಮೆ ಸೋತರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ,” ಎಂದು ಸಿಧು ಹೇಳಿದ್ದಾರೆ.
”ಬಿಜೆಪಿಯು ‘ರಾಷ್ಟ್ರೀಯತೆ’ ವಿಚಾರವನ್ನು ಗುತ್ತಿಗೆ ಪಡೆದಂತೆ ಮಾತನಾಡುತ್ತಿದೆ. ತನ್ನ ಪಕ್ಷದ ಸಿದ್ಧಾಂತ ಒಪ್ಪುವವರನ್ನು ದೇಶಪ್ರೇಮಿಗಳೆಂದು, ಪ್ರತಿಪಕ್ಷದವರನ್ನು ದೇಶ ವಿರೋಧಿಗಳು ಎಂದು ಬಿಂಬಿಸುತ್ತಿದೆ,” ಎಂದೂ ವಾಗ್ದಾಳಿ ನಡೆಸಿದ್ದಾರೆ. 2004 ರಿಂದ ಈ ಕ್ಷೇತ್ರದಲ್ಲಿ ರಾಹುಲ್ ಮೂರು ಬಾರಿ ಸ್ಪರ್ಧಿಸಿ ಬಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2014ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ಎದುರು ಗೆಲುವಿನ ಅಂತರ ಕಡಿಮೆಯಾಗಿತ್ತು.

Comments
Post a Comment