ಮತ ಚಲಾಯಿಸಲು ವಿಫಲವಾದ ದಿಗ್ವಿಜಯ್ ಸಿಂಗ್

ಮಧ್ಯಪ್ರದೇಶ ಭೋಪಾಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ತಮಗೆ ತಾವೇ ಮತ ಚಲಾಯಿಸಲು ವಿಫಲರಾಗಿದ್ದಾರೆ. ದೇಶದೆಲ್ಲೆಡೆ ಇಂದು ಆರನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಈ ವೇಳೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ರಾಜ್ ಗ್ರಹದ ಪೋಲಿಂಗ್ ಬೂತ್ನಲ್ಲಿ ಮತ ಚಲಾಯಿಸಬೇಕಿತ್ತು .ಆದರೆ ದಿಗ್ವಿಜಯ್ ಸಿಂಗ್ ಅವರು ಇಡೀ ದಿನ ತಮ್ಮ ಸಮಯವನ್ನು ಮಧ್ಯಪ್ರದೇಶದಲ್ಲಿ ಕಳೆದ ಕಾರಣ ಮತ ಚಲಾಯಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ .ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್ ಅವರು ಮತ ಚಲಾಯಿಸದೇ ಇರುವ ಕುರಿತು ನನಗೆ ಬೇಸರವಾಗಿದೆ ಎಂದಿದ್ದಾರೆ .ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ದಿಗ್ವಿಜಯ್ ಸಿಂಗ್ ಅವರು ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಸೋಲನ್ನೊಪ್ಪಿಕೊಳ್ಳಲು ಪರಿಸ್ಥಿತಿಯಲ್ಲಿ ಇದ್ದಾರೆ ಮತ್ತು ಕಂಗಾಲಾಗಿದ್ದಾರೆ ಈ ಕಾರಣದಿಂದಲೇ ಅವರು ಮತ ಚಲಾಯಿಸಲಿಲ್ಲ ಎಂದು ಹೇಳಿದೆ.

Buzz from Bhopal: a nervous Digvijaya Singh is camping in Bhopal and has so far not left for Raghopur, place where he was supposed to cast his vote from. So the two time CM is struggling against the Sadhvi…

Comments