ನಾನು ಸೇನೆಯಲ್ಲಿದ್ದೆ, ಯುಪಿಎ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ಗೊತ್ತಿದೆ!

ನವದೆಹಲಿ: ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ನನಗೆ ತಿಳಿದಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋಡ್​ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯಕ್ಕೆ ಬರುವ ಮುನ್ನ ನಾನು ಭಾರತೀಯ ಸೇನೆಯಲ್ಲಿದ್ದೆ. ಸೇನೆಯ ಕಾರ್ಯಾಚರಣೆಗಳ ಕುರಿತು ನಮಗೆ ತಿಳಿಯುವುದಿಲ್ಲವೆ? ಸೈನಿಕರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಪರ ನಿಂತಿದೆ. ಸೈನಿಕರು ಸುಮ್ಮನೆ ಮೋದಿ ಪರವಾಗಿ ನಿಂತಿಲ್ಲ. ಸೇನೆಯಲ್ಲಿ ಮತ್ತು ಗಡಿ ಪ್ರದೇಶದಲ್ಲಿ ಏನಾಗುತ್ತದೆ ಎಂಬುದು ಅವರಿಗೆ ಗೊತ್ತಿದೆ ಎಂದು ಯುಪಿಎ ಅವಧಿಯಲ್ಲಿ 6 ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬ ಕಾಂಗ್ರೆಸ್​ ವಾದವನ್ನು ರಾಥೋಡ್​ ನಿರಾಕರಿಸಿದ್ದಾರೆ.


ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ಬಾರಿ ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು. ಆದರೆ, ಅದನ್ನು ನಾವು ಎಂದಿಗೂ ಮತ ಗಳಿಕೆಗಾಗಿ ಬಳಸಿಕೊಂಡಿರಲಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಇದರ ಬೆನ್ನಲ್ಲೇ ಯುಪಿಎ ಸರ್ಕಾರದ ಅವಧಿಯಲ್ಲಿ 6 ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗಿತ್ತು ಎಂಬ ವಿವರವನ್ನು ಕಾಂಗ್ರೆಸ್​ ಇಂದು ಸಂಜೆ ಬಿಡುಗಡೆ ಮಾಡಿತ್ತು. (ಏಜೆನ್ಸೀಸ್​)

Comments