ಕೋಲಾರದಲ್ಲಿ ಬಿಜೆಪಿ ಗೆಲುವು ಖಚಿತ; ಮಾಜಿ ಕಾಂಗ್ರೆಸ್‌ ಶಾಸಕನ ಹೇಳಿಕೆಯಿಂದ ಮೈತ್ರಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ

ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರು 500 ಮತಗಳ ಅಂತರದಿಂದಾದರೂ ಗೆಲುವು ಸಾಧಿಸುತ್ತಾರೆಂದು ಮಾಜಿ ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜು ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಂಜು, ನನ್ನನ್ನು ಕೆಪಿಸಿಸಿ ಅವರು ನೊಟೀಸ್‌ ನೀಡಿದ್ದಾರೆ,ಕಿತ್ತು ಹಾಕುತ್ತೀನಿ ಅಂದಿದ್ದಾರೆ. ಕಿತ್ತು ಹಾಕಲಿಕ್ಕೆಅದೇನು ಡಿಸಿ , ಎಸಿ ಪೋಸ್ಟಾ. ಅದರಿಂದ ನನಗೆ ಜೀವನ ಇದೆಯಾ ಎಂದು ಪ್ರಶ್ನಿಸಿದರು. ಅವರು ನೋಡಿಕೊಳ್ಳುವುದಾದರೆ ನೋಡಿಕೊಳ್ಳಲಿ , ಆಮೇಲೆ ನಾವು ನೋಡಿಕೊಳ್ಳುತ್ತೇವೆಎಂದು ಹೈಕಮಾಂಡ್‌ಗೆ ಸವಾಲು ಹಾಕಿದರು. ಯಾರಿಗೂ ಮೋಸ ಮಾಡಿಲ್ಲ, ಜನರಿಗೋಸ್ಕರ ಹೋರಾಟ ಮಾಡಿದವರು.


ಕೆ.ಎಚ್‌.ಮುನಿಯಪ್ಪ ಅವರಿಗಿಂತ ಹೆಚ್ಚು ದೈವಭಕ್ತ ನಾನು. 700 ದೇವಸ್ಥಾನ, ಮಸೀದಿ, ಚರ್ಚುಗಳನ್ನು ನೋಡಿದ್ದೇನೆ ಎಂದರು. ಚುನಾವಾಣೆ ಅಂದಾಗಒಬ್ಬರನ್ನು ಮಾತ್ರಬೆಂಬಲಿಸಲು ಆಗುವುದು ನಾನು ಬೆಂಬಲಿಸಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿರುವುದನ್ನು ಒಪ್ಪಿಕೊಂಡರು. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ 500 ಮತಗಳಿಂದಾದರೂ ಗೆಲುವು ಸಾಧಿಸುವುದು ಖಚಿತ ಎಂದರು. ಸರ್ಕಾರಕ್ಕೆ 2 ಲಕ್ಷ ಮತಗಳ ಅಂತರದಿಂದ ಮುನಿಸ್ವಾಮಿ ಗೆಲುವು ಸಾಧಿಸುತ್ತಾರೆ ಎಂದು 2
ವರದಿಗಳು ಹೋಗಿವೆ ಎಂದರು.

Comments