ಪ್ರಧಾನಿ ನರೇಂದ್ರ ಮೋದಿ ಸಚ್ಛಾರಿತ್ರ್ಯದ ರಾಜಕಾರಣಕ್ಕೆ ಮನಸೋತು ಅನೇಕ ರಾಜಕೀಯ ನಾಯಕರು ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ. ಒಂದು ಕಡೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಘಟ ಬಂಧನ್ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆನ್ನುವ ಹುನ್ನಾರ ನಡೆಸುತ್ತಿದ್ದರೆ ಇತ್ತ ಅದೇ ಪ್ರಾದೇಶಿಕ ಪಕ್ಷಗಳಿಂದ ಸ್ಥಳೀಯ ಪ್ರಭಾವೀ ನಾಯಕರು ಬಿಜೆಪಿಯತ್ತ ವಾಲುತ್ತಿದ್ದಾರೆ.
ಒಡಿಶಾ ರಾಜಕೀಯದಲ್ಲಿ ಪ್ರಭಾವ ಬೀರಬಲ್ಲ ಓರ್ವ ರಾಜಕಾರಣಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಒಡಿಸಾ ರಾಜಕಾರಣದಲ್ಲಿ ಬದಲಾವಣೆಯ ಬಿರುಗಾಳಿ ಬೀಸಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಬಿಜು ಜನತಾದಳ ಮಾಜಿ ಸಂಸದ ವೈಜಯಂತ್ ಜಯ ಪಾಂಡಾ ಅವರು ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಒಡಿಶಾದಲ್ಲಿ ಬಿಜೆಪಿ ಶಕ್ತಿ ಹೆಚ್ಚಿದಂತಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಪಾಂಡಾ ಸೋಮವಾರ ಇಲ್ಲಿ ಭೇಟಿಯಾದರು.
ಒಡಿಶಾ ಬಿಜೆಪಿ ಘಟಕದ ಮುಖಂಡರು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಜುಯೆಲ್ ಓರಮ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರದ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಪಾಂಡಾ ವಾಗ್ದಾಳಿ ನಡೆಸಿದರು. ‘ರಾಜ್ಯದಲ್ಲಿ ಬದಲಾವಣೆ ಬೇಕಿದ್ದು, ಅದು ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಪಾಂಡಾ ಅವರ ಸೇರ್ಪಡೆಯಿಂದ ರಾಜ್ಯದ ಕರಾವಳಿಯಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಲಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
Comments
Post a Comment