ಭಾರತದಲ್ಲಿ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕಿಸ್ತಾನಿ ಉಗ್ರರು ಮತ್ತು ಪ್ರತ್ಯೇಕವಾದಿಗಳು ಯಾವ ರೀತಿ ಅಟ್ಟಹಾಸ ಮೆರೆಯುತ್ತಾರೋ ,ಅದೇ ರೀತಿ ಇಸ್ರೇಲ್ ಗಡಿ ಪ್ರದೇಶವಾದ ಗಾಜಾದಿಂದ ಇಸ್ಲಾಮಿಕ್ ಹಮ್ಮಸ್ ಉಗ್ರರು ಅಟ್ಟಹಾಸ ಮೆರೆಯುತ್ತಾ ಇರುತ್ತಾರೆ.ಇಸ್ರೇಲ್ ಮಾತ್ರ ಹಮ್ಮಸ್ ಉಗ್ರರ ದಾಳಿಗೆ ಅವರನ್ನು ಬುಡ ಸಮೇತ ಕಿತ್ತು ಹಾಕುವ ದಾಳಿಯನ್ನು ನಡೆಸುತ್ತಾ ಇರುತ್ತದೆ.ಇದಕ್ಕೆ ಉದಾಹರಣೆ ಎಂಬಂತೆ ಮೇ ಮೊದಲ ವಾರದಲ್ಲಿ ಹಮ್ಮಸ್ ಉಗ್ರರು ಇಸ್ರೇಲನ್ನು ಗುರಿಯಾಗಿಸಿ 250ಕ್ಕೂ ಹೆಚ್ಚು ರಾಕೆಟ್ ಗಳನ್ನು ದಾಳಿ ನಡೆಸಿದ್ದಾರೆ. ಇಸ್ರೇಲ್ ತನ್ನ ಸೇನೆಯಲ್ಲಿರುವ ಕ್ಷಿಪಣಿ ಪ್ರತಿರೋಧಕ ವ್ಯವಸ್ಥೆ ಐರನ್ ಡೋಮ್ ಮೂಲಕ ಹೆಚ್ಚಿನ ರಾಕೆಟ್ ಗಳನ್ನು ಆಗಸದಲ್ಲಿ ನಷ್ಟಗೊಳಿಸಿದೆ.ಘಟನೆಯಲ್ಲಿ ೪ ಇಸ್ರೇಲ್ ನಾಗರಿಕರು ಮೃತಪಟ್ಟಿದ್ದಾರೆ. ಇನ್ನು ಹಮ್ಮಸ್ ಉಗ್ರರ ವಿರುದ್ಧ ವೈಮಾನಿಕ ದಾಳಿಗೆ ಪ್ರಧಾನಿ ಬೆಂಜಮಿನ್ ನೇತ್ಯಾಹು ಆದೇಶಿಸಿದ ಬೆನ್ನಲ್ಲೇ ಮುಗಿಬಿದ್ದ ಇಸ್ರೇಲ್ ವೈಮಾನಿಕ ಪಡೆ ಹಮ್ಮಸ್ ಉಗ್ರರ ಪ್ರಮುಖ ನೆಲೆಗಳನ್ನು ಧ್ವಂಸಗೊಳಿಸಿದೆ.ಅದರಲ್ಲೂ ಪ್ರಮುಖವಾಗಿ ಈ ದಾಳಿಗೆ ಕುಮ್ಮಕ್ಕು ನೀಡಿ ಹಮ್ಮಸ್ ಉಗ್ರರಿಗೆ ಹಣಕಾಸು ವ್ಯವಸ್ಥೆ ಮಾಡಿದ ಹಮೀದ್ ಅಹ್ಮದ್ ಅಬೆದ್ ಕುದರಿ (34)ಯನ್ನು ಭಾನುವಾರ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭವೇ ಕಾರನ್ನೇ ಉಡಾಯಿಸಿ ಬಿಟ್ಟಿದೆ. ಹಮೀದ್ ಇರಾನ್ ಮುಖಾಂತರ ಹಣ ಸಂಗ್ರಹಿಸಿ ಹಮ್ಮಸ್ ಉಗ್ರರಿಗೆ ಪೂರೈಕೆ ಮಾಡುತ್ತಿದ್ದ ಮತ್ತು 2018 ರಲ್ಲಿ ಈತನ ಹಣ ವರ್ಗಾವಣೆಯ ಸಂಸ್ಥೆಯನ್ನು ಉಗ್ರರ ಚಟುವಟಿಕೆಗೆ ಸಂಬಂಧಿಸಿ ನಿಷೇಧ ಹೇರಲಾಗಿತ್ತು ಎಂದು ಇಸ್ರೇಲ್ ಸೇನಾ ಮೂಲಗಳು ತಿಳಿಸಿವೆ. ಹಮೀದ್ ಅಹ್ಮದ್ ಅಬೆದ್ ಕುದರಿ ಕಾರಿನ ಮೇಲೆ ಇಸ್ರೇಲ್ ಯಾವ ರೀತಿ ಗುರಿಯಿಟ್ಟು ಉಡಾಯಿಸಿದೆ ನೋಡಿ
Comments
Post a Comment