ಕೇರಳದ ಮುಸ್ಲಿಂ ಶಿಕ್ಷಣ ಸಂಸ್ಥೆಯಲ್ಲಿ ಮುಖಮುಚ್ಚುವ ಬಟ್ಟೆ ನಿಷೇಧ #Kerala #MES #Muslim #Islam #Burqaban #SrilankaAttack

ಕೋಳಿಕ್ಕೋಡ್: ಶ್ರೀಲಂಕಾ ಚರ್ಚ್‌ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ಬುರ್ಖಾ ಮತ್ತು ಮುಖ ಮುಚ್ಚುವ ಎಲ್ಲ ರೀತಿಯ ಬಟ್ಟೆಗೆ ನಿಷೇಧವಿಧಿಸಿರುವ ಬೆನ್ನಲ್ಲೇ, ಕೇರಳದ ಮುಸ್ಲಿಂವಿದ್ಯಾಸಂಸ್ಥೆಯೊಂದು ತನ್ನ ವ್ಯಾಪ್ತಿಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮುಖಮುಚ್ಚುವ ಬಟ್ಟೆ ನಿಷೇಧಿಸಿದೆ. ಆದರೆ ಅದು ಬುರ್ಖಾ ಎಂಬ ಕುರಿತು ಸ್ಪಷ್ಟ ಉಲ್ಲೇಖವಿಲ್ಲ.

ಕೇರಳದ ಮುಸ್ಲಿಂ ಎಜ್ಯುಕೇಷನಲ್ ಸೊಸೈಟಿ, ಹೆಣ್ಣುಮಕ್ಕಳು ಮುಖಮುಚ್ಚಿ ಶಾಲಾ-ಕಾಲೇಜಿಗೆ ಪ್ರವೇಶಿಸುವಂತಿಲ್ಲ. 2019-20 ನೇ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ ಎಂದು ಎಂಇಎಸ್ ಸಂಸ್ಥೆಯ ಅಧ್ಯಕ್ಷ ಡಾ. ಫಝಲ್ ಗಫೂರ್ ತಿಳಿಸಿದ್ದಾರೆ.
ಎಂಇಎಸ್‌ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜು ಸಹಿತ 150 ಶಿಕ್ಷಣ ಸಂಸ್ಥೆಗಳಿವೆ. ಈ ಎಲ್ಲ ಶಾಲೆ-ಕಾಲೇಜುಗಳಿಗೆ ನೋಟಿಸ್ ಕಳುಹಿಸಿ, ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ.

ಮುಸ್ಲಿಂ ಸಮುದಾಯದ ಒಳಿತಿಗಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ. ವಸ್ತ್ರಸಂಹಿತೆ ಪಾಲನೆ ಕಡ್ಡಾಯವಾಗಿದೆ. ಜತೆಗೆ ಅಧೀನ ಶಾಲೆ-ಕಾಲೇಜುಗಳ ಮಂಡಳಿಗೂ ಸೂಚನೆ ನೀಡಿ, ಈ ನಿಯಮ ಪಾಲಿಸಲು ನೋಟಿಸ್ ಜಾರಿಮಾಡಲಾಗಿದೆ. ಶಿಕ್ಷಣ ಮತ್ತು ಕೇರಳದ ಮುಸ್ಲಿಂ ಸಮಾಜದಲ್ಲಿ ಅರಿವು ಮೂಡಿಸಲು ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಶ್ರೀಲಂಕಾ ದಾಳಿಗೂ ಮೊದಲೇ ಈ ಕ್ರಮ ಜಾರಿಗೆ ಸೂಚನೆ ನೀಡಲಾಗಿತ್ತು ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ

Comments