ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದ ಒಬ್ಬರು ಈಗ ಸಂಸದರಾಗಿದ್ದಾರೆ. ಅವರೇ ಒಡಿಶಾದ ಪ್ರತಾಪ್ ಚಂದ್ರ ಸಾರಂಗಿ ಅವರು. ಅವರು ಈಗ ಮೋದಿಯವರ ನೂತನ ಸಂಸತ್ತಿನಲ್ಲಿ ಕೂಡಾ ಒಂದು ಪ್ರಮುಖ ಆಕರ್ಷಣೆಯಾಗಿದ್ದಾರೆ. ಗುಡಿಸಲ ವಾಸ, ಸೈಕಲ್ ಸವಾರಿಯ ಮೂಲಕ ಚುನಾವಣಾ ಪ್ರಚಾರ ಹಾಗೂ ಹಣವನ್ನೇ ಬಳಸದೆ ತಮ್ಮ ಸರಳತೆಯ ಮೂಲಕವೇ ಚುನಾವಣೆ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದಾರೆ. ಆ ಸರಳ ವ್ಯಕ್ತಿತ್ವದ, ಸರಳ ಜೀವನದ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿರುವ ಪ್ರತಾಪ್ ಚಂದ್ರ ಸಾರಂಗಿಯವರಿಗೆ ಈಗ ಸಚಿವ ಸ್ಥಾನವನ್ನು ನೀಡಲಾಗಿದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ.
ಮತ್ತೊಂದು ವಿಶೇಷ ಕೂಡಾ ಈಗ ಅವರ ಪಾಲಾಗಿದೆ. ಅದೇನೆಂದರೆ ಪ್ರತಾಪ್ ಅವರಿಗೆ ಈಗ ಒಂದಲ್ಲ ಎರಡು ರಾಜ್ಯಗಳ ಖಾತೆಗಳು ಅವರಿಗೆ ದಕ್ಕಿವೆ. ಸಣ್ಣ ಮತ್ತು ಮದ್ಯಮ ಉದ್ಯಮಗಳ ರಾಜ್ಯ ಖಾತೆ ಸಚಿವ ಹಾಗೂ ಪಶು ಸಂಗೋಪನೆ, ಹೈನುಗಾರಿಕೆ ಹಾಗೂ ಮೀನುಗಾರಿಕೆ ಖಾತೆ ರಾಜ್ಯ ಸಚಿವರಾಗಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಾಪ್ ಚಂದ್ರ ಸಾರಂಗಿಯವರು ಬಹಳ ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ತನ್ನನ್ನು ತಾನು ತೊಡಗಿಸಿಕೊಂಡು ದುಡಿದಿದ್ದಾರೆ. ಹಣವಿಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಿ, ವಿಜಯ ಸಾಧಿಸಿರುವುದು, ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ವಿಜಯವಾಗಿದೆ.
ಒಡಿಶಾದ ಬಿಗುಸರಾಯ್ ನಿಂದ ತಮ್ಮ ಪ್ರತಿಸ್ಪರ್ಧಿಗಿಂತ 12,956 ಮತಗಳಿಂದ ಅವರು ಜಯ ಗಳಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕರ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರು ಜನರಲ್ಲಿ ದೇಶಸೇವೆಯ ಕಿಚ್ಚನ್ನು ಹಚ್ಚಲು ಬಹಳ ಪ್ರಯಾಸ ಪಟ್ಟಿದ್ದಾರೆ. 2004 ರಲ್ಲಿ ಬಿಜೆಪಿಗೆ ಸೇರಿದ ಅವರು 2009 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಕೂಡಾ ಗೆಲುವು ದಾಖಲಿಸಿದ್ದರು. ಹಿಂದೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸೋಲುಂಡರೂ ಈಗ ಅವರ ಘನ ವಿಜಯ ಹಾಗೂ ದೊರೆತ ಎರಡೆರೆಡು ಸ್ಥಾನಗಳು ಅವರ ಶ್ರಮದ ಫಲವಾಗಿದೆ.
Comments
Post a Comment