ಕಾಂಗ್ರೆಸ್ ಗೆ ಕೈಕೊಟ್ಟ ಜೆ.ಡಿ ಎಸ್...ಬಿಜೆಪಿ ಜೊತೆ ಮೈತ್ರಿ ಫಿಕ್ಸ್!!



ಮೈತ್ರಿ ಸರ್ಕಾರ ಬೀಳುವುದು ಬಹುತೇಕ ಖಚಿತವಾಗಿದೆ , ಆದರೆ ಮತ್ತೊಂದು ಮೈತ್ರಿ ಸರ್ಕಾರಕ್ಕೆ ಬಹುತೇಕ ಖಚಿತವಾಗಿದೆ  ಎಂದು ಹೇಳಬಹುದು. ಕಾಂಗ್ರೆಸ್ ಜೊತೆ ಮೈತ್ರಿಯನ್ನು ಬಿಡುವುದು ಖಚಿತವೆಂದು ಹೇಳಲಾಗುತ್ತಿದೆ . ಜೆಡಿಎಸ್  ಪ್ರಮುಖ ನಾಯಕರ ಸೋಲಿಗೆ ನೇರವಾಗಿ ಸಿದ್ಧರಾಮ್ಯನವರೇ  ನೇರಕಾರಣವಾಗಿದ್ದಾರೆಂಬುದು ಬಹುತೇಕ ನಾಯಕರ ಹಂಬಲವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಸಚಿವ ಎಚ್.ಡಿ ರೇವಣ್ಣ ಅವರನ್ನು ಬಿಜೆಪಿ ಶಾಸಕ ಸಿ.ಟಿ ರವಿ ಅವು ಭೇಟಿ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ . ಮೈತ್ರಿ ಸರ್ಕಾರದ  ಉಳುವಿಗೆ ಸಿಎಂ ಸರ್ಕಸ್ ಮಾಡುತ್ತಿರುವ ಬೆನ್ನಲ್ಲಿಯೇ ಈ ಟಾಕ್ ನೆಡೆದಿದೆ, ಈ ಒಂದು ಸಭೆಯು ಒಂದು ಘಂಟೆಗೂ ಹೆಚ್ಚು ಕಾಲ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಮಧ್ಯೆ ಚರ್ಚೆಯು ಹೊಸ ರಾಜಕೀಯ ನಾಂದಿಗೆ ಕಾರಣವಾಗಬಹುದು ಎಂದು ಹೇಳಬಹುದು .

ಹಾಗೆ ಮತ್ತೊಮ್ಮೆ ರಾಜ್ಯದಲ್ಲಿ 20-20 ಸರ್ಕಾರ ರಚನೆಯಾಗುವುದು ಬಹುತೇಕ ಖಚಿತವೆಂಬುದು ಹೇಳಲಾಗುತ್ತಿದೆ , ಬಹುತೇಕ ಕಾಂಗ್ರೆಸ್ ಜೊತೆ ಮೈತ್ರಿಯನ್ನು ತೊಡೆದು ಬಿಜೆಪಿಯ ಜೊತೆಗೆ ಜೆಡಿಎಸ್  ಮೈತ್ರಿ ಪಕ್ಕಾ ಎನ್ನುವಂತಾಗಿದೆ .

Comments