ಕರ್ನಾಟಕಕ್ಕೆ ಮತ್ತ್ತೊಂದು 'ಕೊಡುಗೆ 'ಕೊಟ್ಟ ಮೋದಿ ಸರ್ಕಾರ...



ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದಲ್ಲಿ ಕರ್ನಾಟಕದಿಂದ ನಾಲ್ವರನ್ನು ಸೇರ್ಪಡೆ ಮಾಡಿಕೊಂಡಿದ್ದು, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಸದಾನಂದಗೌಡ ಹಾಗೂ ನಿರ್ಮಲಾ ಸೀತಾರಾಮನ್ ಸಚಿವರಾಗಿದ್ದಾರೆ.
ಇವರುಗಳಿಗೆ ಪ್ರಮುಖ ಖಾತೆ ನೀಡಿರುವ ಜೊತೆಗೆ ಈಗ ಕರ್ನಾಟಕಕ್ಕೆ ಮತ್ತೊಂದು ಕೊಡುಗೆಯನ್ನು ನೀಡಿದ್ದು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರನ್ನು ಸಂಸತ್ ನಲ್ಲಿ ಸರ್ಕಾರದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.
ಇದರ ಜೊತೆಗೆ ಚಿಕ್ಕಮಗಳೂರು – ಉಡುಪಿ ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ಮಹಿಳಾ ಸಂಸದರ ಸಚೇತಕರಾಗಿ ಹಾಗೂ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯದ 21 ಸಂಸದರ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.

Comments