ಮೋದಿ ಸರ್ಕಾರ ತೆರಿಗೆದಾರರನ್ನು ಉತ್ತೇಜಿಸಲು ಹೊಸ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ವಿಶೇಷವಾಗಿದೆ. ಈ ಯೋಜನೆಯಡಿ ಹೆಚ್ಚು ತೆರಿಗೆ ಪಾವತಿ ಮಾಡಿದವರಿಗೆ ಸರ್ಕಾರ ಬಂಪರ್ ಉಡುಗೊರೆ ನೀಡಲಿದೆ. ಹೆಚ್ಚು ತೆರಿಗೆ ಪಾವತಿಸಿದವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವರ ಜೊತೆ ಟೀ ಕುಡಿಯುವ ಅವಕಾಶ ಸಿಗಲಿದೆ.
ಸರ್ಕಾರ ಈಗಾಗಲೇ ತೆರಿಗೆದಾರರಿಗೆ ಪ್ರೋತ್ಸಾಹ ನೀಡಲು ಸಾಕಷ್ಟು ಪ್ರಯತ್ನ ನಡೆಸಿದೆ. ಆದ್ರೆ ಇದು ವಿನೂತನವಾಗಿದೆ. ಹೆಚ್ಚು ತೆರಿಗೆ ಪಾವತಿ ಮಾಡಿದವರಿಗೆ ಚಾಯ್ ಪೇ ಚರ್ಚಾ ಅವಕಾಶ ಸಿಗಲಿದೆ. ವರದಿ ಪ್ರಕಾರ, ಆದಾಯ ತೆರಿಗೆ ಸಂಗ್ರಹ ಹೆಚ್ಚು ಮಾಡಲು ಸರ್ಕಾರ ಈ ಪ್ಲಾನ್ ಮಾಡಿದೆ.
ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸರ್ಕಾರ, ತೆರಿಗೆ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆಯಿದೆ.
ಸರ್ಕಾರ ಮುಂದಿನ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಹಿಂದೆ ತೆರಿಗೆ ಪಾವತಿದಾರರಿಗೆ ನರೇಂದ್ರ ಮೋದಿ ಧನ್ಯವಾದ ಹೇಳಿದ್ದರು. ಈಗ ಅವ್ರ ಜೊತೆ ಟೀ ಕುಡಿಯುವ ನಿರ್ಧಾರಕ್ಕೆ ಬಂದಿದ್ದಾರೆ.
Comments
Post a Comment