ಆ ದಾಳಿಗೂ ಮುನ್ನ ನಾವು ಆದೆಷ್ಟು ಸಿಗರೇಟ್ ಸೇದಿದ್ದದೆವೋ ಲೆಕ್ಕವಿಲ್ಲ. ಪಾಕಿಸ್ತಾನಕ್ಕೆ ಸುಳಿವೂ ನೀಡದಂತೆ ಅಂಥದೊಂದು ಮಹತ್ವದ ದಾಳಿ ನಡೆಸುವದು ನಮ್ಮ ಗುರಿಯಾಗಿತ್ತು. ನಮ್ಮ ಗುರಿ ತಪ್ಪಿರುವುದಕ್ಕೆ ಸಾಧ್ಯವೇ ಇಲ್ಲ" ಎಂದು ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್ ಲೀಡರ್ ವೊಬ್ಬರು ಬಾಲಕೋಟ್ ಏರ್ ಸ್ಟ್ರೈಕ್ ನ ಅನುಭವ ಹಂಚಿಕೊಂಡರು.
ಬಾಲಕೋಟ್ ಏರ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಮೀರಜ್ 2000 ಯುದ್ಧ ವಿಮಾನದ ಇಬ್ಬರು ಪೈಲಟ್ ಗಳು ಎನ್ ಡಿಟಿವಿ ಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಆ ಅನುಭವಗಳನ್ನು ಹಂಚಿಕೊಂಡರು. ಪೈಲಟ್ ಗಳ ಮನವಿ ಮೇರೆಗೆ ಅವರ ಹೆಸರುಗಳನ್ನು ಎನ್ ಡಿಟಿವಿ ಉಲ್ಲೇಖಿಸಿಲ್ಲ.
ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆದಿದ್ದೇ ಸುಳ್ಳು, ಏರ್ ಸ್ಟ್ರೈಕ್ ನಡೆದಿದ್ದರೂ ಭಾರತೀಯ ವಾಯುಸೇನೆ ಉಗ್ರ ನೆಲೆಯನ್ನು ಗುರಿಯಾಗಿಸಿ ಮಾಡಿದ್ದ ದಾಳಿ ಗುರಿತಪ್ಪಿತ್ತು ಎಂಬಿತ್ಯಾದಿ ಹೇಳಿಕೆಗಳಿಗೆ ಪೈಲಟ್ ಗಳು ಕೊಟ್ಟ ವಿವರಣೆ ಉತ್ತರ ನೀಡಿದೆ.
Comments
Post a Comment