ಪಶ್ಚಿಮ ಬಂಗಾಳದಿಂದ ಲೋಕಸಭೆಗೆ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಸಂಸದರಾಗಿರುವ ಅಧೀರ್ ರಂಜನ ಚೌಧರಿಯವರನನು ಪ್ರಧಾನಿ ನರೇಂದ್ರ ಮೋದಿ ನೈಜ ಹೋರಾಟಗಾರ ಎಂದು ಬಣ್ಣಿಸಿದ ಅಪರೂಪದ ಘಟನೆ ನಡೆದಿದೆ. ರವಿವಾರ ನೆಡೆದ ಸರ್ವಪಕ್ಷಗಳ ಸಭೆಯ ಬಳಿಕ ಚೌದರಿಯವರ ಬೆನ್ನು ತಟ್ಟಿದ ಮೋದಿ , ನಿಜಕ್ಕೂ ಹೋರಾಟಗಾರ ಎಂದು ಶ್ಲಾಘಿಸಿದ್ದಾರೆ .
ಸಭೆಯ ಮುಕ್ತಾಯದಲ್ಲಿ ಸಭಾಂಗಣದಿಂದ ಹೊರಹೋಗುವ ಸಂದರ್ಭದಲ್ಲಿ ಚೌಧರಿಯವರ ಬೆನ್ನು ತಟ್ಟಿದ ಮೋದಿ ಕಾಂಗ್ರೆಸ್ ಮುಖಂಡ ಗುಲಾಂನಬಿ ಆಜಾದ್ ಮತ್ತು ಆನಂದ್ ಶರ್ಮಾ ಅವರ ಮುಂದೆ ಇವರೊಬ್ಬ ಹೋರಾಟಗಾರ ಎಂದು ಚೌಧರಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.ನಾನು ಮೋದಿಯವರಿಗೆ ಶುಭ ಕೋರಿದೆ , ಆಗ ಅವರು ಬೆನ್ನುತಟ್ಟಿ , ಎಲ್ಲರ ಮುಂದೆ , ಅಧೀರ್ ಒಬ್ಬ ಹೋರಾಟಗಾರ ಎಂದು ಹೊಗಳಿದರು. ನನಗೆ ಸಂತೋಷವಾಯಿತು . ಎಂದು ಅಧೀರ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.
ನನಗೆ ಯಾರ ಬಗ್ಗೆಯೂ ವೈಯಕ್ತಿಕ ದ್ವೇಷ ಇಲ್ಲ . ನಾವು ಜನಪ್ರತಿನಿಧಿಗಳು . ಬಿಜೆಪಿಯವರು ಕೂಡ ಜನಪ್ರತಿನಿಧಿಗಳು . ನಾನು ನಮ್ಮ ಧ್ವನಿಯನ್ನು ಎತ್ತುತ್ತೇವೆ . ಅವರು ಕೂಡಾ ಮಾಡುತ್ತಾರೆ. ನಾವು ಸಂಸತ್ತಿನಲ್ಲಿ ಮಾತನಾಡಲು ಹೋಗುತ್ತೇವೆಯೇ ಇನಃ ಯುದ್ಧದಲ್ಲಿ ಹೋರಾಡುವ ಸಲುವಾಗಿ ಅಲ್ಲ ಎಂದು ಹೇಳಿದರು
Comments
Post a Comment