ನನ್ನ ಗುಂಡಿಟ್ಟು ಕೊಂದುಬಿಡಿ; ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ..



ಹರ್ಯಾಣದಲ್ಲಿ ಕಾಂಗ್ರೆಸ್‌ ಪಕ್ಷದ ಹೀನಾಯ ಪ್ರದರ್ಶನದ ಬಗ್ಗೆ ಆತ್ಮಾವಲೋಕನ ನಡೆಸಲು ಕರೆಯಲಾಗಿದ್ದ ಸಭೆಯ ವೇಳೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ತನ್ವರ್‌ ಕೂಗಾಡಿ ರಾದ್ಧಾಂತ ಮಾಡಿದ್ದಾರೆ. ಪಕ್ಷದ ಇತರ ಮುಖಂಡರು ಸೋಲಿನ ಹೊಣೆಹೊತ್ತು ರಾಜೀನಾಮೆ ನೀಡುವಂತೆ ಕೇಳಿದಾಗ ‘ನೀವು ನನ್ನನ್ನು ಮುಗಿಸಬೇಕು ಎಂದು ಬಯಸಿದರೆ, ಗುಂಡಿಟ್ಟು ಸಾಯಿಸಿಬಿಡಿ’ ಎಂದು ಕಿರುಚಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಬಾರಿ 10ರಲ್ಲಿ ಒಂದು ಸ್ಥಾನದಲ್ಲೂ ಗೆಲುವು ಸಾಧಿಸಿಲ್ಲ. ಹೀಗಾಗಿ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್‌ ಹೂಡಾ, ಪಕ್ಷದ ಕಳಪೆ ಪ್ರದರ್ಶನಕ್ಕೆ ವಿವರಣೆ ನೀಡುವಂತೆ ತನ್ವರ್‌ ಅವರನ್ನು ಕೇಳಿದ್ದರು.
ಅಲ್ಲದೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಕೇಳಿಬಂದರೂ ತನ್ವರ್‌ ಅದಕ್ಕೆ ಮಣಿದಿರಲಿಲ್ಲ. ಪಕ್ಷದ ಸೋಲಿನ ಪರಾಮರ್ಶೆಯ ಬಗ್ಗೆ ಕರೆಯಲಾಗಿದ್ದ ಸಭೆಯ ವೇಳೆ ಹರ್ಯಾಣ ಕಾಂಗ್ರೆಸ್‌ ಉಸ್ತುವಾರಿ ಗುಲಾಮ್‌ ನಬಿ ಆಜಾದ್‌, ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ತರುವುದಾಗಿ ಘೋಷಿಸುತ್ತಿದ್ದಂತೆ ತನ್ವರ್‌ ಆಕ್ರೋಶ ಹೊರಹಾಕಿದ್ದಾರೆ.

Comments