ಅತ್ತ ವೈದ್ಯರ ಮುಷ್ಕರ ಕೊನೆಗೊಳ್ಳುತ್ತಲೇ, ಟಿಸಿಎಂಗೆ ಮತ್ತೆ ಪಕ್ಷಾಂತರದ ತಲೆನೋವು ಶುರುವಾಗಿದೆ. ಸೋಮವಾರ ತೃಣಮೂಲ ಕಾಂಗ್ರೆಸ್‌ನ ಶಾಸಕ ಸುನೀಲ್ ಸಿಂಗ್ ಹಾಗೂ 15 ಟಿಎಂಸಿ ಕೌನ್ಸಿಲರ್‌ಗಳು ಹೊಸದಿಲ್ಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ಮೂಲಕ ಈವರೆಗೆ ವಿವಿಧ ಪಕ್ಷಗಳ 10 ಶಾಸಕರು ಬಿಜೆಪಿಗೆ ಸೇರಿದಂತಾಗಿದೆ ಎಂದು ಬಿಜೆಪಿ ನಾಯಕ ಮುಕುಲ್ ರಾಯ್ ತಿಳಿಸಿದ್ದಾರೆ.
Comments
Post a Comment