ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತೊಂದರೆಯಾದಗಲೆಲ್ಲಾ ರಚನಾತ್ಮಕ ಸಲಹೆ ನೀಡಲು ಆರ್‌ಎಸ್‌ಎಸ್ ಸಿದ್ಧ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಎರಡನೇ ಬಾರಿಗೆ ಸರ್ಕಾರ ರಚಿಸಿದ್ದು ಕೇಂದ್ರ ಸರ್ಕಾರಕ್ಕೆ ಅಗತ್ಯವಿದ್ದಾಗ ಸಲಹೆ ನೀಡುವುದಾಗಿ ಹೇಳಿದ್ದಾರೆ.
ಅಧಿಕಾರ ದುರ್ಬಳಕೆಯಾಗದಂತೆ ತಡೆಯುವುದು ಪ್ರಜಾಪ್ರಭುತ್ವ ಸರ್ಕಾರದ ಕರ್ತವ್ಯ. ಪ್ರಜಾಪ್ರಭುತ್ವದ ಮೂಲಕ ಚುನಾಯಿತರಾದವರಿಗೆ ಸಾಕಷ್ಟು ಅಧಿಕಾರವಿರುತ್ತದೆ. ಹಾಗಂತ ಅಧಿಕಾರ ದುರಪಯೋಗ ಮಾಡಿಕೊಳ್ಳಬಹುದು ಎಂದರ್ಥವಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸಮಸ್ಯೆ ಎದುರಾದರೆ ಸಂಘ ಅಗತ್ಯ ಸಲಹೆ ನೀಡಲಿದೆ ಎಂದರು.
Comments
Post a Comment