ಕಾಂಗ್ರೆಸ್ ಗೆ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದು, ಸ್ಪೀಕರ್ ಇದನ್ನು ಕನ್ಫರ್ಮ್ ಮಾಡಿಲ್ಲ. ಆದರೆ ಇದರಲ್ಲಿ ಸತ್ಯ ಇರಬಹುದು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಪರಮೇಶ್ವರ್, ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಇದರಿಂದ ಸರ್ಕಾರದ ಸಂಖ್ಯಾಬಲವೂ ಕೂಡ ಕುಸಿಯುವುದಿಲ್ಲ ಎಂದರು.
'ಕೈ' ಶಾಸಕರ ರಾಜೀನಾಮೆ: ದೇವೇಗೌಡ್ರ ಲೆಕ್ಕಾಚಾರವೇ ಬೇರೆ!
ಶಾಸಕ ಆನಂದ್ ಸಿಂಗ್ ಅವರು ಜಿಂದಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾತುಕತೆಯನ್ನೂ ಕೂಡ ನಮ್ಮ ಜೊತೆ ಮಾಡಿಲ್ಲ. ಈ ಸಂಬಂಧ ಈಗಾಗಲೇ ಉಪ ಸಮಿತಿ ರಚಿಸಿದ್ದೇವೆ. ಅವರ ಬಳಿ ಏನೂ ಹೇಳಿಲ್ಲ ಎಂದರು.
Comments
Post a Comment