ಬಿಜೆಪಿಗೆ ಗುಡ್ ನ್ಯೂಸ್: ಸಿದ್ದರಾಮಯ್ಯನೇ ಆಪರೇಷನ್ ಕಮಲಕ್ಕೆ ಕಾರಣ!!

ನಾನು ಹಾಗೂ ಅಮರೇಗೌಡರು ಇಬ್ಬರೂ ಸಿದ್ದರಾಮಯ್ಯರ ಆಪ್ತರೇ. ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಕಾರಣವಾಗಿದ್ರೆ ನಾವೂ ಬಿಜೆಪಿಗೆ ಹೋಗಬೇಕಿತ್ತು. ಯರೋ ಸಿದ್ದರಾಮಯ್ಯರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡ್ತಿದ್ದಾರೆ ಅಂತಾ ಕೊಪ್ಪಳ ಕಾಂಗ್ರೆಸ್​ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಸಿದ್ದರಾಮಯ್ಯ ಆಪ್ತರೆ. ಕೆಲವರು ಆಮಿಷಕ್ಕೆ ಒಳಗಾಗಿದ್ದಾರೆ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ. ಕಾಂಗ್ರೆಸ್​ನಲ್ಲೇ ಇರ್ತೀನಿ. ಬಿಜೆಪಿ ಹಣ, ಅಧಿಕಾರ ಆಸೆ ತೋರಿಸಿ ಸರ್ಕಾರ ಅಸ್ಥಿರ ಮಾಡುವ ಕೆಲಸ ಮಾಡುತ್ತಿದೆ. ಸರ್ಕಾರ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ನಡೆಯಬಾರದು. ಅತೃಪ್ತರು ಕಾರ್ಯಕರ್ತರನ್ನ ವಿಚಾರಿಸದೇ ರಾಜೀನಾಮೆ ನೀಡಿದ್ದು ಸರಿಯಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು.

Comments