ರಾಜೀನಾಮೆಯ ಇಬ್ಬರು ಶಾಸಕರು ದೋಸ್ತಿ ಸರಕಾಕ್ಕೆ ಬೆಂಬಲ..!

ಬೆಂಗಳೂರು : ಇದೀಗ ಬಿಗ್ ಶಾಕ್ ಎದುರಾಗಿದ್ದು, ಮೈತ್ರಿ ಸರ್ಕಾರದ ಇಬ್ಬರು ಶಾಸಕರು ಮತ್ತೆ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಲು ಸಿದ್ದರಿದ್ದಾರಂತೆ.!
ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ. ನನ್ನ ದಾರಿ ನನಗೆ ಆದರೆ, ವಿಶ್ವಾಸ ಮತ ಸಾಬೀತು ಹಾಗೂ ಫೈನಾನ್ಸ್ ಬಿಲ್ ಸಂದರ್ಭದಲ್ಲಿ ಸದನಕ್ಕೆ ಬಂದು ಬೆಂಬಲ ಕೊಡುತ್ತೇನೆ ರಾಮಲಿಂಗ ರೆಡ್ಡಿ ಹೇಳಿದ್ದಾರಂತೆ
ಹಾಗೇ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೋಷನ್ ಬೇಗ್ ಅವರು ಕೂಡ ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ವಿಶ್ವಾಸದ ಸಾಬೀತಿಗೆ ಮುಂದಾದ್ರೆ ನಾನು ಸದನಕ್ಕೆ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಎರಡು ದಿನದಲ್ಲಿ ಬಹುತೇಕ ಅತೃಪ್ತ ಶಾಸಕರು ವಾಪ್ಸ್ ಬರಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್- ಜೆಡಿಎಸ್ ವಲಯದಲ್ಲಿ ದಟ್ಟವಾಗಿದೆ.

Comments