ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಮನವೊಲಿಸುವಲ್ಲಿ ಅಥವಾ ಅವರ ಸಂಖ್ಯೆ ಕಡಮೆಗೊಳಿಸಲು ವಿಫಲವಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಎರಡು ಅವಕಾಶಗಳು ಗೋಚರಿಸಬಹುದು.
ವಿಶ್ವಾಸಮತ ಯಾಚನೆ ನಿರ್ಣಯ ಮಂಡಿಸುವ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಅಥವಾ ಮಿತ್ರ ಪಕ್ಷ ಕಾಂಗ್ರೆಸ್‌ನ ಒಪ್ಪಿಗೆ ಪಡೆದುಕೊಂಡು ವಿಧಾನಸಭೆ ವಿಸರ್ಜನೆ ಮಾಡಬಹುದು ಎಂಬ ಮಾತು ಗಂಭೀರವಾಗಿ ಕೇಳಿಬರುತ್ತಿದೆ.
ಆಯ್ಕೆ 1- ಅಮೆರಿಕದಿಂದ ವಾಪಸಾದ ಕೂಡಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸಲು ತೀವ್ರ ಪ್ರಯತ್ನ ನಡೆಸಲಿದ್ದಾರೆ. ಆ ಶಾಸಕರು ಕೈಗೆ ಸಿಗದಿದ್ದರೂ ಅವರ ಆಪ್ತರ ಮೂಲಕವೂ ಪ್ರಯತ್ನಿಸಬಹುದು. ಅದೂ ಸಾಧ್ಯವಾಗದೇ ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸೂಚಿಸಿದಲ್ಲಿ ಆಗ ಸಂಕಷ್ಟಎದುರಾಗುತ್ತದೆ.
Comments
Post a Comment